ಕೋಮು ಸಂಘರ್ಷಕ್ಕೆ ತತ್ತರಿಸಿದ ಹರಿಯಾಣ: ನೂಹ್-ಗುರುಗ್ರಾಮ ಜಿಲ್ಲೆಗಳಲ್ಲಿ ಕರ್ಫ್ಯೂ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೋಮು ಸಂಘರ್ಷಕ್ಕೆ ಹರಿಯಾಣ ತತ್ತರಿಸಿದ್ದು, ನೂಹ್ ಮತ್ತು ಗುರುಗ್ರಾಮ್ ಜಿಲ್ಲೆಗಳು ಹೊತ್ತಿ ಉರಿಯುತ್ತಿವೆ. ಕರ್ಫ್ಯೂ ಲೆಕ್ಕಿಸದೇ ಜನ ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗಿದ್ದು, ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡ್ತಿದ್ದಾರೆ.

ಸೋಮವಾರ ಸಂಜೆ ಮೆವಾತ್‌ನಲ್ಲಿ ವಿಹೆಚ್‌ಪಿ- ಬಜರಂಗದಳದ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟದಿಂದ ನಡೆದ ಘರ್ಷಣೆಯಲ್ಲಿ ಇಬ್ಬರು ಹೋಂಗಾರ್ಡ್ಗಳು ಸಾವನ್ನಪ್ಪಿದ್ದು, ರಾತ್ರಿ ಮತ್ತೆ ನಡೆದ ಘರ್ಷಣೆಯಲ್ಲಿ ಇನ್ನಿಬ್ಬರು ಬಲಿಯಾಗಿದ್ದಾರೆ. 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಸಿಡಿಸಿ ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದರು ಸಾಧ್ಯವಾಗುತ್ತಿಲ್ಲ.

ಹತ್ತಾರು ವಾಹನಗಳು ಧಗಧಗಿಸಿವೆ. ಸಿಕ್ಕ-ಸಿಕ್ಕ ಅಂಗಡಿಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ. ಗುರುಗ್ರಾಮದ ಸೆಕ್ಟರ್ 57ರಲ್ಲಿ ಮಸೀಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಮಸೀದಿಯ ಇಮಾಮ್ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಈಗಲೂ ಪರಿಸ್ಥಿತಿ ಉದ್ವಿಗ್ನವಾಗಿಯೇ ಇದ್ದು, ನೂಹ್-ಗುರುಗ್ರಾಮ ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!