ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ತಮನ್ನಾ ಭಾಟಿಯಾ ತಮ್ಮ ಹಳೆಯ ಸಂಬಂಧಗಳ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಇದೀಗ ನಟ ವಿಜಯ್ ವರ್ಮಾ ಜೊತೆ ಎಂಗೇಜ್ ಆಗಿರುವ ತಮನ್ನಾ ತಮ್ಮ ಹಳೆ ಸಂಬಂಧಗಳು ಹೇಗಿದ್ದವು ಎಂದು ಹೇಳಿಕೊಂಡಿದ್ದಾರೆ.
ಮೊದಲ ಬ್ರೇಕಪ್ ವೇಳೆ, ನಾನು ತುಂಬಾ ಚಿಕ್ಕವಳಿದ್ದೆ, ಯಾರ ಮೇಲೂ ಹೆಚ್ಚು ಅವಲಂಬಿತರಾಗೋಕೆ ಆಗೋದಿಲ್ಲ. ಏನಾದರೂ ಸಾಧಿಸಬೇಕು ಎನಿಸಿತ್ತು, ಇನ್ನೂ ಕೆಲ ಕಾರಣಗಳಿಂದ ಬ್ರೇಕಪ್ ಆಯ್ತು ಎಂದಿದ್ದಾರೆ.
ಎರಡನೇಯದು ಆತ ನನ್ನ ಜೊತೆ ಜೀವನ ಪೂರ್ತಿ ಜೊತೆಯಿರಲು ಸೂಕ್ತ ವ್ಯಕ್ತಿ ಅಲ್ಲ ಅನಿಸಿತು. ಸುಳ್ಳು ಹೇಳುವವರ ಜೊತೆ ಜೀವನ ಮಾಡಲು ಸಾಧ್ಯವಿಲ್ಲ. ಸಣ್ಣ ಸಣ್ಣ ವಿಚಾರಕ್ಕೂ ಸುಳ್ಳು ಹೇಳುವವರ ಜೊತೆ ಜೀವನ ಸಾಗಿಸುವುದು ಕಷ್ಟ ಎಂದು ಹೇಳಿದ್ದಾರೆ.