ಪಾಂಡ್ಯ ಮತ್ತು ನತಾಶಾ ವಿಚ್ಛೇದನದ ಬಗ್ಗೆ ವದಂತಿಗಳು ಹರಿದಾಡುತ್ತಿವೆ ಮತ್ತು ಅವರಿಬ್ಬರೂ ಅದರ ಬಗ್ಗೆ ಇನ್ನೂ ಮಾತನಾಡದಿದ್ದರೂ, ವಿಚ್ಛೇದನದ ನಂತರ ಹಾರ್ದಿಕ್ ತಮ್ಮ ಸಂಪತ್ತಿನ 70% ನತಾಶಾಗೆ ನೀಡಲಿದ್ದಾರೆ ಎಂಬ ಊಹಾಪೋಹಗಳಿವೆ. ಸುದ್ದಿ ತಿಳಿದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಅವರ ಹಳೆಯ ಸಂದರ್ಶನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನನ್ನ ಆಸ್ತಿಯ 50% ಅಲ್ಲ 5% ಭಾಗ ಕೂಡಾ ಯಾರಿಗೂ ಸಿಗೋಲ್ಲ ಎಂಬ ವಿಡಿಯೋ ವೈರಲ್ ಆಗಿದೆ.
@Bhai_saheb ಎಂಬ X ಖಾತೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಹಳೆಯ ಸಂದರ್ಶನದ ದೃಶ್ಯಾವಳಿಗಳು ಸೋರಿಕೆಯಾಗಿದ್ದು, ವೀಡಿಯೊ ಪ್ರಸ್ತುತ ವೈರಲ್ ಆಗುತ್ತಿದೆ. ಪಾಂಡ್ಯ ಸಂದರ್ಶನದಲ್ಲಿ ನನ್ನ ಅಪ್ಪನ ಅಕೌಂಟ್ನಲ್ಲಿ ಅಮ್ಮನ ಹೆಸರಿದೆ, ಅಣ್ಣ ಹಾಗೂ ನನ್ನ ಅಕೌಂಟ್ನಲ್ಲಿಯೂ ಕೂಡಾ ಅಮ್ಮನ ಹೆಸರಿದೆ. ನಮ್ಮ ಮನೆಯ ಕಾರು, ಆಸ್ತಿಗಳಿಂದ ಹಿಡಿದು ಎಲ್ಲವೂ ಕೂಡಾ ಅಮ್ಮನ ಹೆಸರಿನಲ್ಲಿದ್ದು, ನಮ್ಮೆಲ್ಲರ 50% ಅಕೌಂಟ್ ಪಾರ್ಟ್ನರ್ಶಿಪ್ ಅಮ್ಮನ ಹೆಸರಿನಲ್ಲಿದೆ. ಹೀಗಿರುವಾಗ ನನ್ನ ಆಸ್ತಿಯ 50% ಅಲ್ಲ 5% ಭಾಗ ಕೂಡಾ ಯಾರಿಗೂ ಸಿಗೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಮನುಷ್ಯ ತುಂಬಾನೇ ಸ್ಮಾರ್ಟ್ ಎಂದು ಹಾರ್ದಿಕ್ ಪಾಂಡ್ಯ ಅವರು ತೆಗೆದುಕೊಂಡ ಈ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.