ದೇಶದಲ್ಲಿ ವಿದ್ಯುತ್‌ಗೆ ಸಖತ್ ಡಿಮ್ಯಾಂಡ್: ಒಂದೇ ದಿನದಲ್ಲಿ ಬಳಕೆ 239.96 ಗಿಗಾವಾಟ್‌ಗೆ ಹೆಚ್ಚಳ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ವಿದ್ಯುತ್ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ಬಗ್ಗೆ ವಿದ್ಯುತ್ ಸಚಿವಾಲಯ ಅಂಕಿ ಅಂಶ ಬಿಡುಗಡೆ ಮಾಡಿದ್ದು, ದೇಶದಲ್ಲಿ ವಿದ್ಯುತ್‌ನ ಬೇಡಿಕೆ ಶುಕ್ರವಾರದಂದು 239.96 ಗಿಗಾವಾಟ್‌ಗೆ ಹೆಚ್ಚಳವಾಗಿದೆ ಎಂದು ಹೇಳಿದೆ.

ಬುಧವಾರ ದಿನದಂದು 235.06 ಗಿಗಾವಾಟ್, ಗುರುವಾರ 236.59 ಗಿಗಾವಾಟ್ ವಿದ್ಯುತ್ ಬೇಡಿಕೆ ಇತ್ತು ಎಂದು ಸಚಿವಾಲಯ ಹೇಳಿದೆ. ದೇಶದ ಬಹುತೇಕ ಭಾಗದಲ್ಲಿ ತಾಪಮಾನ ತೀವ್ರ ಹೆಚ್ಚಳ ಉಂಟಾಗಿರುವ ಪರಿಣಾಮ ಹವಾ ನಿಯಂತ್ರಕ, ಕೂಲರ್‌ಗಳ ಬಳಕೆ ಹೆಚ್ಚಿದ್ದು, ಇದು ವಿದ್ಯುತ್ ಬೇಡಿಕೆ ಹೆಚ್ಚಳಕ್ಕೆ ಕಾರಣ ಎಂದು ಸಚಿವಾಲಯ ಹೇಳಿದೆ.

ಈ ತಿಂಗಳ ಆರಂಭದಲ್ಲಿ ವಿದ್ಯುತ್ ಬೇಡಿಕೆ ಹಗಲಿನ ವೇಳೆ 235 ಗಿಗಾವಾಟ್, ಸಂಜೆ ವೇಳೆ 225 ಗಿಗಾವಾಟ್ ಇದೆ. ಇದು ಜೂನ್‌ನಲ್ಲಿ ಹಗಲು 240 ಗಿಗಾವಾಟ್, ಸಂಜೆ 235 ಗಿಗಾವಾಟ್ ಇರಲಿದೆ. ಈ ಬೇಸಿಗೆ ಅವಧಿಯಲ್ಲಿ ಬೇಡಿಕೆಯು 260 ಗಿಗಾವಾಟ್‌ನ್ನು ಮುಟ್ಟಲಿದೆ ಎಂದು ಸಚಿವಾಲಯ ಅಂದಾಜಿಸಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿದ್ಯುತ್ ಬೇಡಿಕೆ ಸಾರ್ವಕಾಲಿಕ ಗರಿಷ್ಠ 243.27 ಗಿಗಾವಾಟ್‌ನ್ನು ದಾಖಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!