July 27, 2026
Monday, July 27, 2026
spot_img

ಈಗಿನ್ನೂ ಪುಟ್ಟ ಕಂದ ನಿಮ್ಮ ಮಡಿಲಿಗೆ ಬಂದಿದ್ಯಾ? ಈ ಐದು ವಸ್ತುಗಳನ್ನು ಇಂದೇ ಖರೀದಿಸಿ ಸಹಾಯವಾದೀತು

ಮೊದಲ ಬಾರಿಗೆ ಅಮ್ಮಂದಿರಾದವರಿಗೆ ಏನು ಮಾಡ್ಬೇಕು ಏನು ಮಾಡಬಾರದು ಅನ್ನೋದು ಗೊತ್ತಾಗೋದೇ ಇಲ್ಲ. ಮಕ್ಕಳನ್ನು ಮಲಗಿಸೋದು ಹೇಗೆ? ಹಾಲು ಕುಡಿಸೋದು ಹೇಗೆ ಎನ್ನುವುದು ಕೂಡ ಗೊತ್ತಾಗೋದಿಲ್ಲ. ಮನೆಯಲ್ಲಿ ದೊಡ್ಡವರಿದ್ದರೂ ಅವರ ಮೆಥಡ್ಸ್‌ ಈಗಿನವರು ಒಪ್ಪೋದಿಲ್ಲ. ಬೇಸಿಗೆ ಕಾಲದಲ್ಲಿ ತಾಯಿ ಸ್ವೆಟರ್‌, ಸಾಕ್ಸ್‌ ಹಾಕಬೇಕು ಅಂದ್ರೆ ಹೇಗೆ ಕೇಳ್ತಾರೆ? ಇದೇ ರೀತಿ ಒಪಿನಿಯನ್‌ಗಳ ಬದಲಾವಣೆ ಇದ್ದಿದ್ದೇ. ಈಗಿನ ತಾಯಂದಿರಿಗೆ ಸಹಾಯವಾಗಲು ಈ ಪ್ರಾಡಕ್ಟ್ಸ್‌ಗಳನ್ನು ತನ್ನಿ..

ಅಲೆಕ್ಸಾ ಅಥವಾ ಸ್ಮಾರ್ಟ್‌ ಡಿವೈಸ್‌
ಮಗುವಿನ ಸಣ್ಣ ಹಾಡುಗಳು, ಮ್ಯೂಸಿಕ್‌ ಅವರನ್ನು ಕಾಮ್‌ ಮಾಡೋದಕ್ಕೆ ಮನೆಯಲ್ಲಿ ಈ ರೀತಿಯ ಡಿವೈಸ್‌ ಇದ್ದರೆ ಬೆಸ್ಟ್‌. ನಿಮ್ಮ ಒಂದು ಕೂಗಿನಲ್ಲೇ ಕೆಲಸ ಮುಗಿಯುತ್ತದೆ. ಮಗುವೂ ಶಾಂತವಾಗುತ್ತದೆ.

ವೆಟ್‌ ಪ್ರೂಫ್‌ ಕ್ಲಾತ್‌

ಪುಟಾಣಿ ಕಂದಮ್ಮಗಳು ದಿನಕ್ಕೆ ಏನಿಲ್ಲಾ ಅಂದ್ರು ಹತ್ತರಿಂದ ಹದಿನೈದು ಬಾರಿಯಾದ್ರೂ ಮೂತ್ರವಿಸರ್ಜನೆ ಮಾಡುತ್ತವೆ. ದಿನವಿಡೀ ಡೈಪರ್‌ ಹಾಕುವ ಬದಲು ತೆಳುವಾದ ಕಾಟನ್‌ ಬಟ್ಟೆ ಹಾಕಿ, ಕೆಳಕ್ಕೆ ವೆಟ್‌ ಪ್ರೂಫ್‌ ಬಟ್ಟೆ ಹಾಕಿದ್ರೆ ಉತ್ತಮ

ಪಂಪಿಂಗ್‌ ಮಶೀನ್‌

ಕೆಲವು ಮಕ್ಕಳು ತಾಯಂದಿರ ಬಳಿ ಹಾಲು ಕುಡಿಯೋದಕ್ಕೆ ಕಿರಿಕಿರಿ ಮಾಡುತ್ತಾರೆ. ಕೆಲವೊಮ್ಮೆ ಕುಡಿಯುತ್ತಾರೆ ಕೆಲವೊಮ್ಮೆ ಇಲ್ಲವೇ ಇಲ್ಲ. ಹೀಗಿರುವಾಗ ಪಂಪಿಂಗ್‌ ಮಶೀನ್‌ ಎಲೆಕ್ಟ್ರಿಕ್‌ನದ್ದು ತನ್ನಿ. ಇದರಲ್ಲಿ ಹಾಲು ಪಂಪ್‌ ಮಾಡಿ ಬಾಟಲಿಗೆ ಹಾಕಿದ್ರೆ ಯಾರಾದ್ರೂ ಮಗುವಿಗೆ ಕುಡಿಸ್ತಾರೆ. ಇದರಿಂದ ತಾಯಂದಿರಿಗೂ ಸ್ವಲ್ಪ ಫ್ರೀ ಟೈಮ್‌ ಸಿಗುತ್ತದೆ.

ಮಕ್ಕಳಿಗೆ ಪುಟಾಣಿ ಬೆಡ್‌

ಮಕ್ಕಳನ್ನು ಮಲಗಿಸಲು ಪುಟಾಣಿ ಬೆಡ್‌, ಅದರ ಮೇಲೆ ಅಲುಗಾಡುವ ಆಟಸಾಮಾನುಗಳಿದ್ದರೆ ಹೆಚ್ಚಿನ ಸಮಯ ಮಕ್ಕಳು ಹಾಯಾಗಿ ಆಟ ಆಡಿಕೊಂಡು ಇರುತ್ತಾರೆ.

ಫೀಡಿಂಗ್‌ ಪಿಲ್ಲೋ

ನ್ಯೂಬಾರ್ನ್‌ ಮಕ್ಕಳನ್ನು ಕೈಯಲ್ಲಿ ಇಟ್ಟುಕೊಂಡು ಹಾಲು ಕುಡಿಸುವುದು ಕಷ್ಟದ ಕೆಲಸ. ಇದರ ಬದಲು ಫೀಡಿಂಗ್‌ ಪಿಲ್ಲೋ ತನ್ನಿ. ಇದನ್ನು ನಿಮ್ಮ ಸೊಂಟದ ಸುತ್ತ ಹಾಕಿಕೊಂಡು ಮಗುವನ್ನು ಅದರ ಮೇಲೆ ಮಲಗಿಸಿಕೊಳ್ಳಿ. ನಿಮಗೆ ಫೀಡಿಂಗ್‌ಗೆ ಒಂದೊಳ್ಳೆ ಆಂಗಲ್‌ ಸಿಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !