Sunday, December 10, 2023

Latest Posts

ಹಾಸನಾಂಬ ದೇವಿಯ ದರುಶನಕ್ಕೆ ನ.15ರ ವರೆಗೆ ಅವಕಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವರುಷಕ್ಕೊಮ್ಮೆ ದರುಶನ ನೀಡುವ ಹಾಸನಾಂಬೆಯನ್ನು ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ಹರಿದು ಬರುತ್ತಿದೆ. ನವೆಂಬರ್ 3ರಂದು ಹಾಸನಾಂಬೆ ಗರ್ಭಗುಡಿಯ ಬಾಗಿಲು ತೆರೆದಿದ್ದು, ನವೆಂಬರ್ 15ರ ವರೆಗೆ ದೇವಿಯ ದರುಶನಕ್ಕೆ ಅವಕಾಶವಿರುತ್ತದೆ. ತದನಂತರ
ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ.

ಈ ದೇವಿಯು ವರುಷಕ್ಕೊಮ್ಮೆ ಮಾತ್ರ ದರುಶನ ನೀಡುವ ಕಾರಣ ದೇವಿಯನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ.

ಪ್ರತಿ ವರ್ಷ ಆಶ್ವೀಜ ಮಾಸ ಪೌರ್ಣಮಿಯ ನಂತರ ಬರುವ ಗುರುವಾರದಂದು ಹಾಸನಾಂಬೆಯ ದೇವಾಲಯವನ್ನು ಪ್ರಮುಖ ವ್ಯಕ್ತಿಗಳ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ಬಲಿಪಾಡ್ಯಮಿಯ ಮಾರನೇ ದಿನ ದೇವಿಗೆ ದೀಪ, ಅಕ್ಕಿ ನೈವೇದ್ಯ ಅಲಂಕಾರಗಳು ಇರುವಂತೆಯೇ ಬಿಟ್ಟು ದೇವಾಲಯವನ್ನು ಮುಚ್ಚಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!