ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ ಸ್ಟಾರ್ ನಟ ಶಿವರಾಜ್ ಕುಮಾರ್ ಬರೋಬ್ಬರಿ 29 ವರ್ಷಗಳ ಬಳಿಕ ಮತ್ತೆ ಯಾಣಗೆ ಭೇಟಿ ನೀಡಿ ಖುಷಿಪಟ್ಟಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆಗೆಂದು ಅಮೆರಿಕಾಗೆ ಹೋಗಿ ಬಂದು ಫ್ರೀಯಾಗಿ ತಮಗಿಷ್ಟವಾಗಿರೋ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದು, ಇದೀಗ ಯಾಣಗೆ ಭೇಟಿ ನೀಡಿದ್ದಾರೆ .
29 ವರ್ಷಗಳ ಹಿಂದೆ ಶಿವಣ್ಣ, ರಮೇಶ್ ಅರವಿಂದ್, ಪ್ರೇಮಾ ಅಭಿನಯದ ನಮ್ಮೂರ ಮಂದಾರ ಹೂವೇ ಸಿನಿಮಾದ ಶೂಟಿಂಗ್ ಅನ್ನು ಯಾಣದಲ್ಲಿ ಮಾಡಲಾಗಿತ್ತು. ಇದೀಗ ಅದೇ ಜಾಗಕ್ಕೆ ಭೇಟಿ ನೀಡಿ ಶಿವಣ್ಣ ಫುಲ್ ಖುಷ್ ಆಗಿದ್ದಾರೆ.
ನಟ ಯಾಣಕ್ಕೆ ಹೋಗಿರು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋ ಜೊತೆಗೆ ‘ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ.. ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ..’ ನಮ್ಮೂರ ಮಂದಾರ ಹೂವೆ ನಂತರ ಮತ್ತೆ ನನ್ನ ಯಾಣ ಭೇಟಿ 29 ವರ್ಷಗಳ ಬಳಿಕ ಅಂತ ಬರೆದುಕೊಂಡಿದ್ದಾರೆ. ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.