ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ: ಸುಟ್ಟು ಭಸ್ಮವಾದ ನಗದು, ಬಂಗಾರ, ಬಟ್ಟೆಗಳು

ಹೊಸದಿಗಂತ ವರದಿ, ಮುಂಡಗೋಡ:

ತಾಲೂಕಿನ ಹುನಗುಂದ ಗ್ರಾಮದಲ್ಲಿ ಆಕಸ್ಮೀಕವಾಗಿ ಶಾರ್ಟ್ ಸರ್ಕ್ಯೂಟನಿಂದ ಮನೆಯೊಂದಕ್ಕೆ ಬೆಂಕಿ ತಗುಲಿ ಮನೆಯಲ್ಲಿರುವ ನಗದು, ಬಂಗಾರ, ಬಟ್ಟೆ, ದವಸ ಧಾನ್ಯಗಳು, ಕಾಗದ ಪತ್ರಗಳು, ಮಕ್ಕಳ ಶಾಲಾ ಕಾಲೇಜುಗಳ ಪಠ್ಯ ಪುಸ್ತಕಗಳು ಸೇರಿದಂತೆ ಇನ್ನಿತರ ಗೃಹ ಬಳಕೆ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಈ ಘಟನೆಯಿಂದ ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ಶನಿವಾರ ಜರುಗಿದೆ.

ಆಕಸ್ಮೀಕ ಬೆಂಕಿಯಿಂದ ಸುಟ್ಟ ಮನೆಯು ಜೈತುನಬಿ ಗಾಡಿವಾಲೆ ಎಂಬುವವರಿಗೆ ಸೇರಿದ್ದಾಗಿದ್ದು. ತಮ್ಮ ಮನೆಯ ಹತ್ತಿರದಲ್ಲಿರುವ ಸಂಬಂಧಿಕರೊಬ್ಬರು ಹೊಸದಾದ ಮೋಟಾರ್ ಸೈಕಲ್ ತಂದಿದ್ದಾರೆಂದು ಕುಟುಂಬ ಸದಸ್ಯರೆಲ್ಲರು ಹೋಗಿದ್ದಾರೆ. ಅದೆ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಟ್ ಸರ್ಕ್ಯೂಟನಿಂದ ಬೆಂಕಿ ತಗುಲಿ ಮನೆಗೆ ಆವರಿಸಿದೆ. ಅದನ್ನು ಕಂಡ ಮನೆಯ ಅಕ್ಕಪಕ್ಕದವರು ಕುಟುಂಬದವರಿಗೆ ತಿಳಿಸಿ ಸಾರ್ವಜನಿಕರು ಹಾಗು ಕುಡುಂಬದವರು ಸೇರಿ ಬೆಂಕಿಯನ್ನು ನಂದಿಸಲು ಮುಂದಾಗಿದ್ದಾರೆ. ಹತೋಟಿಗೆ ಬಾರದ ಬೆಂಕಿ ಸಂಪೂರ್ಣ ಮನೆಗೆ ಆವರಿಸಿದ್ದಲ್ಲದೆ ಮನೆಗೆ ಹತ್ತಿಕೊಂಡಿರುವ ಮನೆಗಳಿಗೆ ಬೆಂಕಿ ತಗುಲುವ ಸ್ಥಿತಿಯಲ್ಲಿದ್ದಾಗ ಕೂಡಲೆ ಮಾಹಿತಿ ಪಡೆದ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ.

ಅಷ್ಟರಲಗಲ್ಲೆ ಮನೆಯಲ್ಲಿದ್ದ ಐದು ಲಕ್ಷ ನಗದು, ೪೦ ಗ್ರಾಮ ಬಂಗಾರದ ಒಡವೆ, ಟಿ.ವಿ, ಪ್ರೀಡ್ಜ ಸೇರಿದಂತೆ ಪಾತ್ರೆಗಳು, ಗೃಹ ಬಳಕೆ ವಸ್ತುಗಳು, ಬಟ್ಟೆಬರೆ, ಧವಸಧಾನ್ಯಗಳು, ಮನೆ ದಾಖಲೆ ಪತ್ರಗಳು ಸೇರಿದಂತೆ ಪರ್ನಿಚರ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿವೆ ಈ ಅವಘಡದಿಂದ ಸುಮಾರು ೨೫ ಲಕ್ಷಕ್ಕಿಂತ ಅಧಿಕ ನಷ್ಟ ಆಗಿದೆ.

ಆಕಸ್ಮಿಕ ಬೆಂಕಿ ಅವಘಡದಿಂದ ಕುಟಂಬದವರಿಗೆ ಉಣ್ಣಲು ತಿನ್ನಲು, ಉಡಲು ಬಟ್ಟೆ, ಹಾಗೂ ಮಲಗಲು ಜಾಗವಿಲ್ಲದೆ ಬೀದಿ ಪಾಲಗಿದ್ದು ಈಗ ಎಲ್ಲವನ್ನು ಕಳೆದುಕೊಂಡು ಬೇರೆಯವರ ಹತ್ತಿರ ಆಶ್ರಯ ಕೇಳುವಂತೆ ಅಲೆದಾಡುವಂತ ಪರಿಸ್ಥಿತಿ ಬಂದೋದಗಿದೆ.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅವಘಡವಾದರು ಇದುವರೆಗು ತಾಲೂಕಿನ ಯಾವಬ್ಬ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ನೊಂದ ಕುಟಂಬದ ಪರೀಸ್ಥಿತಿಯ ಬಗ್ಗೆ ಕಿಂಚಿತ್ತು ಯೋಚನೆ ಮಾಡದೆ ಅವರಿಗೆ ಸಾಂತ್ವಾನ ಹೇಳದೆ ಇರುವವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಪ್ಪ ಪೂಜಾರ, ಸಿಬ್ಬಂದಿಗಳಾದ ಅಮರ ಕಾಂಬಳೆ, ಬಸವರಾಜ ನಾಣಾಪುರ, ಅರುಣ ಮುಲಗೆ, ಚಂದ್ರಪ್ಪ ಲಮಾಣಿ,ಸೋಮಶೇಖರ ಜೀವನನವರ್, ವಿಜಯ ಅಮ್ಮನಗಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!