HEALTHY FOOD| ನಿಮ್ಮ ದಿನಚರಿಯಲ್ಲಿ ಈ ಮೆನುವೊಂದಿರಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೊಳಕೆಯೊಡೆದ ಕಾಳುಗಳು ಹಲವು ಔಷಧೀಯ ಗುಣಗಳ ಖಜಾನೆಯಾಗಿದೆ. ಆರೋಗ್ಯಕ್ಕೆ ಹಲವು ಲಾಭಗಳು ಸಿಗುತ್ತವೆ. ಮೊಳಕೆಯೊಡೆದ ಕಾಳಿನಲ್ಲಿ ಕಂಡುಬರುವ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ನಿಮ್ಮನ್ನು ರೋಗಗಳಿಂದ ರಕ್ಷಿಸುತ್ತದೆ. ಮೊಳಕೆಯೊಡೆದ ಕಾಳು ಸೇವನೆಯು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಸಹ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಮೊಳಕೆ ಕಾಳು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿದೆ.

ಮೊಳಕೆಯೊಡೆದ ಕಾಳುಗಳ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮೊಳಕೆಯೊಡೆದ ಕಾಳು ಸೇವಿಸಿದರೆ, ನೀವು ಅದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಸಿಗಲಿದೆ. ಪ್ರೋಟೀನ್, ಫೈಬರ್, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸತು, ಕಬ್ಬಿಣ, ಖನಿಜ, ಆಂಟಿ-ಆಕ್ಸಿಡೆಂಟ್, ತಾಮ್ರ, ವಿಟಮಿನ್ ಎ, ಬಿ, ವಿಟಮಿನ್ ಸಿ, ವಿಟಮಿನ್ ಇ ಮುಂತಾದ ಅಂಶಗಳು ಮೊಳಕೆಯೊಡೆದ ಮೂಂಗ್‌ನಲ್ಲಿ ಕಂಡುಬರುತ್ತವೆ. ಇದರಲ್ಲಿ ಕೊಬ್ಬಿನ ಪ್ರಮಾಣವೂ ತುಂಬಾ ಕಡಿಮೆ. ಇದರಿಂದ ಹೃದಯದ ಆರೋಗ್ಯಕ್ಕಾಗಿ ತುಂಬಾ ಉಪಯೋಗ ಹಾಗೂ ತೂಕ ಇಳಿಕೆಗೆ ಸಹಾಯಕವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!