MUST READ | ಕೆಲಸ ಮಾಡೋದು ಇದ್ದದ್ದೇ, ಚೆನ್ನಾಗಿ ನಿದ್ದೆ ಮಾಡಿ.. ಉದ್ಯೋಗಿಗಳಿಗೆ ಇಂದು ರಜೆ ಗಿಫ್ಟ್ ನೀಡಿದ ಕಂಪನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗ್ಗೆ ಬೇಗ ಎದ್ದು, ಸ್ನಾನ ಮಾಡಿ, ತಿಂಡಿಗೆ ಬಾಕ್ಸ್‌ಗೆ ತುಂಬಿಸಿ ಕೈಯಲ್ಲಿ ಸ್ಯಾಂಡ್‌ವಿಚ್ ಹಿಡಿದುಕೊಂಡು ಮೆಟ್ರೋ ಹತ್ತಿದ ಮೇಲೆ ಇಂದು ನಿಮಗೆ ರಜ, ಮನೆಯಲ್ಲಿ ಹಾಯಾಗಿ ನಿದ್ದೆ ಮಾಡಿ ಎಂದು ಕಂಪನಿಯೇ ಮೇಲ್ ಮಾಡಿದ್ರೆ?

ವಾವ್ಹ್ ಇಂಥ ಕನಸು ನಿಜವಾಗ್ಬಾರ್ದಾ ಅನ್ಕೋತಿದೀರಾ? ಇದು ನಾವು ಹೇಳ್ತಿರೋ ಕಥೆ ಅಲ್ಲ ನಿಜವಾದ ವಿಷಯ!

ಬೆಂಗಳೂರಿನಲ್ಲಿ ವೇಕ್‌ಫಿಟ್ ಕಂಪನಿ ತನ್ನ ಉದ್ಯೋಗಿಗಳಿಗೆ ಅಂತಾರಾಷ್ಟ್ರೀಯ ನಿದ್ರಾ ದಿನದ ಅಂಗವಾಗಿ ಇಂದು ರಜೆ ಘೋಷಿಸಿದೆ. ಆರೋಗ್ಯ ಕ್ಷೇಮಕ್ಕಾಗಿ ಇಂದು ಆಫೀಸ್‌ಗೆ ಬರಬೇಡಿ, ಮಲಗಿ ವಿಶ್ರಾಂತಿಸಿ ಎಂದು ಕಂಪನಿಯ ಎಲ್ಲ ಉದ್ಯೋಗಿಗಳಿಗೆ ಹೆಚ್ಆರ್ ಮೇಲ್ ಮಾಡಿದ್ದಾರೆ.

ಸರ್ಪೈಸ್ ಹಾಲಿಡೇ, ಅನೌನ್ಸಿಂಗ್ ದಿ ಗಿಫ್ಟ್ ಆಫ್ ಸ್ಲೀಪ್ ಎನ್ನುವ ಸಂದೇಶವುಳ್ಳ ಮೇಲ್ ಕಳಿಸಿದ್ದು, ಕಂಪನಿ ಉದ್ಯೋಗಿಗಳು ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ವೇಕ್‌ಫಿಟ್ ಸೊಲ್ಯೂಷನ್ಸ್ ಕಳಿಸಿದ ಈ ಸಂದೇಶ ಎಲ್ಲೆಡೆ ವೈರಲ್ ಆಗಿದ್ದು, ನಮಗೂ ರಜೆ ಸಿಗಬಾರದೆ ಎಂದು ಉದ್ಯೋಗಿಗಳು ಅಂದುಕೊಂಡಿದ್ದಾರೆ. ಈ ಕಂಪನಿ ಇದಕ್ಕೂ ಮುನ್ನ ಆಫೀಸ್‌ನಲ್ಲಿ ಎಲ್ಲ ಉದ್ಯೋಗಿಗಳಿಗೂ ಮಧ್ಯಾಹ್ನ ಅರ್ಧ ಗಂಟೆ ನಿದ್ದೆ ಮಾಡೋದಕ್ಕೂ ಅವಕಾಶ ಕೊಟ್ಟಿತ್ತು!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!