ಸಿಟ್ಟಲ್ಲಿ ಸಂಬಂಧಗಳನ್ನೇ ಒಡೆದಿದ್ದೀರಾ? ಸಿಟ್ಟು ತಗ್ಗಿಸೋಕೆ ಹೀಗೆ ಮಾಡಿ..

ಸಿಟ್ಟು ಮನುಷ್ಯನ ಸಂಬಂಧಗಳನ್ನು ಸುಲಭವಾಗಿ ಹಾಳುಮಾಡುತ್ತದೆ. ಸಿಟ್ಟಿನ ಒಂದೇ ಒಂದು ಮಾತು ಇಡೀ ಮನೆಯನ್ನ ಮನಸ್ಸನ್ನ ಹಾಳು ಮಾಡಿ ಬಿಡುತ್ತದೆ. ಸಿಟ್ಟಿನ ಮನುಷ್ಯರ ಜೊತೆ ಇರೋದಕ್ಕೆ ಯಾರೂ ಇಷ್ಪಪಡೋದಿಲ್ಲ. ಸಿಟ್ಟನ್ನು ಕಂಟ್ರೋಲ್ ಮಾಡೋದು ಹೇಗೆ?

  • ಸಿಟ್ಟು ಬಂದಾಕ್ಷಣ, ಬಾಯಿಗೆ ಬರುವ ಮಾತು, ಕೈಗೆ ಬರುವ ಆಕ್ಷನ್ ಎಲ್ಲವನ್ನೂ ನಿಲ್ಲಿಸಿ ಎದ್ದು ಹೋಗಿ.
  • ಸಿಟ್ಟು ಬಂದಿದೆ ಎಂದಾಕ್ಷಣ ಒಂದರಿಂದ ನೂರು ಎಣಿಸಿ, ಕೋಪ ತಗ್ಗುತ್ತದೆ.
  • ಸಿಟ್ಟು ಬಂದಾಕ್ಷಣ ನೀವು ಹೇಳಲು ಹೊರಟಿರುವ ಮುಂದಿನ ಮಾತು ಏನು, ಅದರಿಂದ ಇನ್ನೇನು ಪರಿಣಾಮ ಆಲೋಚಿಸಿ
  • ಪ್ರತಿದಿನ ತಪ್ಪದೇ ಯೋಗ, ಧ್ಯಾನ ಅಭ್ಯಾಸ ಮಾಡಿ
  • ತಕ್ಷಣ ಬೇರೆ ಆಲೋಚನೆ ಮಾಡಿ, ಸಾಧ್ಯವಾಗದಿದ್ದರೆ ಆ ಜಾಗದಲ್ಲಿ ಇರಬೇಡಿ.
  • ನಿಮ್ಮದೇ ಪಾಸಿಟಿವ್ ಶಬ್ದಗಳ ಮಂತ್ರವೊಂದನ್ನು ಮಾಡಿಕೊಳ್ಳಿ, ನಾನು ಈಗ ಏನೂ ಮಾತನಾಡುವುದಿಲ್ಲ, ದೇವರಿದ್ದಾನೆ, ತಾಳ್ಮೆ ಇರಲಿ ಈ ರೀತಿ.
  • ನಿಮಗೆ ಯಾವುದರಿಂದ, ಏಕೆ ಕೋಪ ಬರುತ್ತದೆ. ಟ್ರಿಗರ್ ಆಗುವುದು ಯಾವಾಗ ಈ ಬಗ್ಗೆ ವಿಚಾರ ಮಾಡಿ.
  • ದೀರ್ಘ ಉಸಿರಾಡಿ, ಬಾಯಿಯಿಂದ ಉಸಿರು ಬಿಡಿ
  • ಯಾರ ಜೊತೆಗಾದರೂ ಮಾತನಾಡಿ, ನಿಮ್ಮ ಫ್ರಸ್ಟ್ರೇಷನ್ ಹೊರಹಾಕಿ.
  • ನಿಮ್ಮ ಬಗ್ಗೆ ನೀವು ಆಲೋಚಿಸಿ ಸಿಟ್ಟು ನಿಮ್ಮನ್ನೂ ತಿನ್ನುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!