ಈ ಕೇಕ್ ನೀವೊಮ್ಮೆ ಟೇಸ್ಟ್ ಮಾಡಿದ್ದೇ ಆದ್ರೆ ಖಂಡಿತಾ ಮತ್ತೊಮ್ಮೆ ಮಿಸ್ ಮಾಡದೇ ತಿನ್ನೋದಂತೂ ಗ್ಯಾರಂಟಿ!. ಹಾಗಾದ್ರೆ ಈ ಕೇಕ್ ಮಾಡೋದು ಹೇಗೆ? ಏನೇನು ಬೇಕು ಎಲ್ಲವನ್ನೂ ನೋಡೋಣ.
ಮೊದಲು ಹಲಸಿನ ಹಣ್ಣು ಬಿಡಿಸಿ ಬೀಜ ತೆಗೆದು, ಸೊಳೆಗಳನ್ನು ಪ್ರತ್ಯೇಕವಾಗಿ ತೆಗೆದಿಟ್ಟುಕೊಳ್ಳಿ.
ಒಂದು ದೊಡ್ಡ ಕಪ್ ಆಗುವಷ್ಟು ಸೊಳೆಯನ್ನು ಚೆನ್ನಾಗಿ ಮಿಕ್ಸಿಯಲ್ಲಿ ರುಬ್ಬಿ. ನಂತರ ಒಂದು ಕಪ್ ಎಣ್ಣೆ, ಒಂದು ಕಪ್ ಬೆಲ್ಲ, ಎರಡು ಕಪ್ ಹಾಲು ಹಾಕಿ ಮತ್ತೊಮ್ಮೆ ಮಿಕ್ಸಿಯಲ್ಲಿ ಮಿಕ್ಸ್ ಮಾಡಿ. ಕುಕ್ಕರ್ ಬಟ್ಟಲೊಳಗೆ ಅದೇ ಆಕಾರದ ಬಾಳೆಲೆಯನ್ನು ಕತ್ತರಿಸಿಟ್ಟು, ತಪ್ಪ ಸವರಿಕೊಳ್ಳಿ.
ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಎರಡು ಕಪ್ ಗೋಧಿ ಹಿಟ್ಟು, 1/2 ಟೀ ಸ್ಪೂನ್ ಅಡುಗೆ ಸೋಡಾ, ಒಂದು ಟೀ ಸ್ಪೂನ್ ಬೆಕಿಂಗ್ ಪೌಡರ್, ಸ್ವಲ್ಪ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸಿಯಲ್ಲಿ ರುಬ್ಬಿ ಪಾತ್ರೆಗೆ ಹಾಕಿ. ಇವುಗಳನ್ನು ಕುಕ್ಕರ್ ಬಟ್ಟಲಿಗೆ ಹಾಕಿ ಬಾದಾಮಿ ಬೀಜದಿಂದ ಅಲಂಕರಿಸಿ ಕುಕ್ಕರ್ ಒಳಗೆ ಇಟ್ಟು ಮುಚ್ಚಳ ಮುಚ್ಚಿ ಮುಕ್ಕಾಲು ಗಂಟೆ ಬೇಯಿಸಿ.( ಗ್ಯಾಸ್ಕೆಟ್,ವಿಶಿಲ್ ಹಾಕುವುದು ಬೇಡ.)
ನಂತರ ಕಟ್ ಮಾಡಿ ಸರ್ವ್ ಮಾಡಿ. ರುಚಿ ರುಚಿಯಾದ ಹಲಸಿನ ಹಣ್ಣಿನ ಕೇಕ್ ಎಲ್ಲರೂ ಇಷ್ಟಪಡೋದಂತೂ ಗ್ಯಾರಂಟಿ!