September 22, 2026
Tuesday, September 22, 2026
spot_img

ಚಿಂತೆ ಬಿಡಿ ತಿಂಡಿ ಮಾಡಿ 61 | ತಿನ್ನಬಾರದ್ದೆಲ್ಲಾ ತಿಂದು ಹೊಟ್ಟೆ ಕೆಟ್ಟಿದೆಯಾ? ಅಕ್ಕಿ ಕಾಯಿಯ ಗಂಜಿ ಹೀಗೆ ತಯಾರಿಸಿ ತಿಂದು ನೋಡಿ

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ರೆಸಿಪಿ ವೈರಲ್‌ ಆಗುತ್ತವೆ. ಅದನ್ನು ಪ್ರತಿಯೊಬ್ಬರು ಟ್ರೈ ಮಾಡೋದು ಮಾಮೂಲಿ. ಅದರಲ್ಲಿಯೂ ಫ್ಯಾನ್ಸಿ ಅಲ್ಲದ ಟ್ರಡೀಷನಲ್‌ ರೆಸಿಪಿಗಳು ವೈರಲ್‌ ಆದಾಗ ಎಲ್ಲರೂ ಒಮ್ಮೆ ಟ್ರೈ ಮಾಡಿಯೇ ಮಾಡ್ತಾರೆ. ಅಂತದರಲ್ಲಿ ಈ ಅಕ್ಕಿ ಉಪ್ಪು ಗಂಜಿ ಕೂಡ ಒಂದು. ತುಂಬಾ ಸಿಂಪಲ್‌ ಆದ ರೆಸಿಪಿ ಇದಾಗಿದ್ದು, ಜನ ಇಷ್ಟಪಟ್ಟು ಇದನ್ನು ತಿಂದು ವಿಡಿಯೋ ಮಾಡಿ ಅಪ್‌ಲೋಡ್‌ ಮಾಡ್ತಿದ್ದಾರೆ. ಈ ರೆಸಿಪಿ ಹೇಗೆ ಮಾಡೋದು? ಏನೆಲ್ಲಾ ಪದಾರ್ಥಗಳು ಬೇಕು? ಇಲ್ಲಿದೆ ನೋಡಿ..

ಸಾಮಾಗ್ರಿಗಳು

ಅಕ್ಕಿ
ಉಪ್ಪು
ಕಾಯಿಹಾಲು
ನೀರು

ಮಾಡುವ ವಿಧಾನ
ಮೊದಲು ಅಕ್ಕಿಯನ್ನು ತೊಳೆದು ಅದಕ್ಕೆ ಎರಡುರಷ್ಟು ಅಳತೆ ನೀರು ಹಾಕಿ ಕುಕ್ಕರ್‌ನಲ್ಲಿ ಇಡಿ. ಎರಡು ವಿಶಲ್‌ನ ನಂತರ ಆಫ್‌ ಮಾಡಿ

ಅನ್ನ ಬಿಸಿಯಾಗಿದ್ದಾಗಲೇ ಚೆನ್ನಾಗಿ ಸ್ಮಾಶ್‌ ಮಾಡಿ ಉಪ್ಪು ಹಾಕಿ, ನಂತರ ಸ್ವಲ್ಪ ಕಾಯಿಹಾಲು ಹಾಕಿ ಇನ್ನೊಮ್ಮೆ ಕ್ಲೋಸ್‌ ಮಾಡಿ

ಇನ್ನೊಂದು ವಿಶಲ್‌ ಹಾಕಿಸಿ ಆಫ್‌ ಮಾಡಿದ್ರೆ ಅಕ್ಕಿ ಕಾಯಿ ಗಂಜಿ ರೆಡಿ

ಇದನ್ನು ನಿಮ್ಮಿಷ್ಟದ ಪಲ್ಯದ ಜೊತೆ ತಿನ್ನಬಹುದು, ನಾನ್‌ ವೆಜ್‌ ಪ್ರಿಯರಾದರೆ ಮೊಟ್ಟೆಯ ಜೊತೆಯೂ ಸೇವಿಸಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !