ಮದುವೆಯಾದ ಹೊಸತರಲ್ಲಿ ಎಲ್ಲವೂ ಕಲರ್‌ಫುಲ್ ಬಟ್ ಬರುತ್ತಾ ಬರುತ್ತಾ ಬಣ್ಣ ಮಾಸಿದಂತೆ ಆಗುತ್ತದೆ. ಸಣ್ಣ ಪುಟ್ಟ ಮಾತುಗಳಿಗೆ ಆರ್ಗುಮೆಂಟ್ ಆಗುತ್ತದೆ. ಮಾತಿಗೆ ಮಾತು, ಟೋನ್ ಇಷ್ಟವಾಗದೇ ಇರೋದು, ನಾನು ನೀನು ಅನ್ನೋ ಈಗೋ ಸಂಬಂಧವನ್ನು ಹಾಳುಮಾಡೋಕೆ ಆರಂಭಿಸುತ್ತದೆ. ಇದನ್ನು ಸಣ್ಣದರಲ್ಲೇ ಚಿವುಟಿ ಹಾಕಿ, ನಿಮ್ಮ ನಡುವೆ ಜಗಳ ಯಾಕೆ ಆಗುತ್ತಿರಬಹುದು?
ಇಂಟಿಮೆಸಿ ಕೊರತೆ, ಸೆಕ್ಸ್ ಕಡಿಮೆ, ಹಗ್ ಮಾಡೋದು, ಮುತ್ತು ಕೊಡೋದು, ಫಿಸಿಕಲ್ ಟಚ್ ಕಡಿಮೆ ಆಗುವುದು ಒಂದು ಕಾರಣ.
ಮನೆಕೆಲಸ, ಮಗುವಿನ ಕೆಲಸ, ಆಫೀಸ್ ಕೆಲಸ ಹೀಗೆ ಗಂಡ ಹೆಂಡತಿ ಮಧ್ಯೆ ಬೇರೆ ಬೇರೆ ಅತಿಯಾದ ಕೆಲಸಗಳು ಬಂದಾಗ ಜಗಳ ಸಾಮಾನ್ಯ.
ಮಾತನಾಡುವುದು ಕಡಿಮೆ ಆಗೋದು, ಅಥವಾ ಸರಿಯಾಗಿ ಕಮ್ಯುನಿಕೇಟ್ ಮಾಡದೇ ಇರುವುದು ಸಮಸ್ಯೆ.
ಇಷ್ಟು ವರ್ಷ ನಮ್ಮ ದುಡ್ಡು ಅಂತಿದ್ದು, ಇದೀಗ ನನ್ನ ದುಡ್ಡು, ನಿನ್ನ ದುಡ್ಡು ಎಂದು ಬದಲಾಗೋದು, ಯಾವುದಕ್ಕೆ ಖರ್ಚು ಮಾಡಬೇಕು ಎನ್ನುವ ವಿಷಯಕ್ಕೆ ಗಲಾಟೆ ಆಗೋದು..
ಹೆಚ್ಚು ಜನ ನಿಮ್ಮ ಸಂಬಂಧದ ಮಧ್ಯೆ ಇರೋದು.. ಅತ್ತೆ ಮಾವ ತಂದೆ ತಾಯಿ ನಾದಿನಿ ಮೈದುನ ಸ್ನೇಹಿತರು ಹೀಗೆ..
ಸಮಯ ಇಲ್ಲದೇ ಇರುವುದು ಬೆಳಗ್ಗೆ ಎಂಟಕ್ಕೆ ಹೋಗಿ ಎಂಟಕ್ಕೆ ಮನೆಗೆ ಬರುವ ಹಾಗೆ ಆಗುವುದು ಮತ್ತೆ ಮನೆಯ ಜವಾಬ್ದಾರಿ ಹೀಗೆ ಜಗಳ ಆಗಬಹುದು.