BEVERAGES |Dates ಕಾಫಿ ಮಿಲ್ಕ್ ಶೇಕ್ ಕಾಂಬಿನೇಶನ್ ಟ್ರೈ ಮಾಡಿದ್ದೀರಾ? ಇಲ್ಲಿದೆ ರೆಸಿಪಿ

ಮಿಲ್ಕ್‌ಶೇಕ್ ಅಂದ್ರೆ ತುಂಬಾ ಜನರಿಗೆ ಇಷ್ಟ. ಇದನ್ನು ತಯಾರಿಸುವುದು ಕೂಡ ತುಂಬಾ ಸುಲಭ. ನೀವು ತುಂಬಾ ಮಿಲ್ಕ್‌ಶೇಕ್‌ಗಳನ್ನು ಟೇಸ್ಟ್ ಮಾಡಿರುತ್ತೀರಾ, ಆದರೆ ಖರ್ಜೂರ ಮತ್ತು ಕಾಫಿ ಮಿಲ್ಕ್‌ಶೇಕ್‌ಗಳನ್ನು ಟ್ರೈ ಮಾಡಿದ್ದೀರಾ? ಮನೆಯಲ್ಲಿಯೇ ಸುಲಭವಾಗಿ ತಯಾರಿಸುವುದು ಹೇಗೆ ಎಂದು ನೋಡಿ.

ಮಿಲ್ಕ್ ಶೇಕ್ ಮಾಡಲು ಬೇಕಾಗುವ ಪದಾರ್ಧ :
1 ಕಪ್ ಖರ್ಜೂರ
10 ಸ್ಪೂನ್ ಕಾಫಿ ಪೌಡರ್
6 ಕಪ್ ಹಾಲು
5-6 ಏಲಕ್ಕಿ
3 ಚಮಚ ಸಕ್ಕರೆ
¾ ಕಪ್ ತಾಜಾ ಕ್ರೀಂ

ಮಿಲ್ಕ್ ಶೇಕ್ ಮಾಡುವ ವಿಧಾನ :

ಮೊದಲು ಒಂದು ಪಾತ್ರೆಗೆ ನೀರು ಮತ್ತು ಕಾಫಿ ಪೌಡರ್ ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಸಕ್ಕರೆ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಸಕ್ಕರೆ ಕರಗುವವರೆಗೂ ಚೆನ್ನಾಗಿ ಮಿಕ್ಸ್ ಮಾಡಿ. ಗ್ಯಾಸ್ ಬಂದ್ ಮಾಡಿ ತಣ್ಣಗಾಗುವವರೆಗೆ ಬಿಡಿ. ಖರ್ಜೂರಕ್ಕೆ ಸ್ವಲ್ಪ ಹಾಲು ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಕಾಫಿ ಪುಡಿ, ಹಾಲು ಹಾಗೂ ಕ್ರೀಂ ಹಾಕಿ ಮಿಶ್ರಣ ಮಾಡಿ. ಇದೀಗ ಡೇಟ್ಸ್ ಕಾಫಿ ಮಿಲ್ಕ್ ಶೇಕ್ ಸವಿಯಲು ಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!