ದಿನಭವಿಷ್ಯ : ಮಿಶ್ರಫ‌ಲಗಳ ದಿನ, ಭೂ ವ್ಯವಹಾರದಲ್ಲಿ ಲಾಭ

ಮೇಷ
ಪ್ರತಿಯೊಂದು ಕೆಲಸ ಅತಿರೇಕವಾಗಿ ಮಾಡಿ ಟೀಕೆ ಎದುರಿಸುವಿರಿ. ಕ್ಷುಲ್ಲಕ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮನಶ್ಯಾಂತಿ ಹಾಳು ಮಾಡಿಕೊಳ್ಳದಿರಿ.

ವೃಷಭ
ಕೌಟುಂಬಿಕ ವಿಚಾರದಲ್ಲಿ ಹೆಚ್ಚು ಹೊಣೆಗಾರಿಕೆ. ಕೆಲವರ ಅಸಹಕಾರ ಅಸಹನೆ ಮೂಡಿಸಬಹುದು. ಹೊಂದಿಕೊಡು ನಡೆವುದು ಮುಖ್ಯ.

ಮಿಥುನ
ಈ ದಿನ ಹಲವಾರು ವಿಷಯ ಮನಸ್ಸನ್ನು ಕಾಡುತ್ತದೆ. ಅದರಿಂದಾಗಿ ನಿಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸಲು ಕಷ್ಟ ಪಡುವಿರಿ.

ಕಟಕ
ಸಣ್ಣ ವಿಷಯವೊಂದು ದೊಡ್ಡ ತಲೆಬೇನೆ ಸೃಷ್ಟಿಸಬಹುದು. ಮುಖ್ಯ ಕಾರ್ಯಕ್ಕೂ ಅಡ್ಡಿ ಉಂಟಾಗಲಿದೆ. ಸಮಚಿತ್ತತೆ ಬೆಳೆಸಿಕೊಳ್ಳಿರಿ.

ಸಿಂಹ
ಕೆಲಸದಲ್ಲಿ ಏಕಾಗ್ರತೆ ಇರಲಿ. ಮನಸ್ಸು ಅತ್ತಿತ್ತ ಚಲಿಸದಂತೆ ನೋಡಿಕೊಳ್ಳಿ. ಕೌಟುಂಬಿಕ ಸಂಬಂಧ ಸದೃಢ. ಭಿನ್ನಮತ ನಿವಾರಣೆ.

ಕನ್ಯಾ
ಕೆಲಸದಲ್ಲಿ ತಪ್ಪು ಉಂಟಾದೀತು. ನಿಮ್ಮ ಸಾಮರ್ಥ್ಯದ ಪೂರ್ಣ ಉಪಯೋಗ ಪಡೆಯಲು ವಿಫಲರಾಗುವಿರಿ. ಆಪ್ತರಿಂದ ಅಸಹಕಾರ.

ತುಲಾ
ಇತರರ ಸಲಹೆ ಸಾರಾಸಗಾಟಾಗಿ ತಿರಸ್ಕರಿಸಬೇಡಿ. ಕೆಲವೊಮ್ಮೆ ಅದರಿಂದ ಒಳಿತಾದೀತು. ಆರೋಗ್ಯ ಸುಸ್ಥಿರ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.

ವೃಶ್ಚಿಕ
ವೃತ್ತಿಯಲ್ಲಿ ತೃಪ್ತಿಕರ ಕಾರ್ಯ ನಿರ್ವಹಣೆ. ಕೌಟುಂಬಿಕ ವಿಚಾರ ವೊಂದು ಅಶಾಂತಿಗೆ ಕಾರಣವಾಗಿದ್ದರೂ ಬೇಗನೆ ಇತ್ಯರ್ಥ ಕಾಣುವುದು.

ಧನು
ನಿಮ್ಮ ಪ್ರಯತ್ನದ ಕುರಿತಾದ ಸೋಲು ಗೆಲುವಿನ  ಕಾಯುವಿಕೆಗೆ ಇಂದು ಅಂತ್ಯ ಬೀಳಲಿದೆ.  ನಿಮಗೆ ಪೂರಕ ಫಲಿತಾಂಶ ದೊರಕಲಿದೆ.

ಮಕರ
ಉತ್ಸಾಹದ ದಿನ. ನಿಮ್ಮ ಸಾಧನೆಗಾಗಿ ಕೆಲವರ ಮೆಚ್ಚುಗೆಗೆ ಕಾಯುತ್ತೀರಿ. ಅದು ದೊರಕಲಿಲ್ಲವೆಂದಾದರೆ ನಿರಾಶೆ ಬೇಡ.  ಬಂಧು ಸಹಕಾರ.

ಕುಂಭ
ವೃತ್ತಿಯಲ್ಲಿ ಸಹೋದ್ಯೋಗಿಗಳ ಅಸಹಕಾರ. ಮನೆಯಲ್ಲೂ  ಹೊಂದಾಣಿಕೆಯ ಕೊರತೆ. ಒಟ್ಟಿನಲ್ಲಿ ನಿರುತ್ಸಾಹದ ದಿನ.

ಮೀನ
ಕೆಲವರ ಜತೆ ವಾಗ್ವಾದ ಉಂಟಾದೀತು.  ನಿಮ್ಮ ಕೋಪತಾಪ ನಿಯಂತ್ರಿಸಬೇಕು. ಹೆಚ್ಚು ಮಾತಾಡಲು ಹೋಗಬೇಡಿ. ಖರ್ಚಿನಲ್ಲಿ ಹೆಚ್ಚಳ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!