ಸಾಮಾಗ್ರಿಗಳು
ಪಾಲಕ್ ಸೊಪ್ಪು
ಈರುಳ್ಳಿ
ಹಸಿಮೆಣಸು
ಬೆಳ್ಳುಳ್ಳಿ
ಜೀರಿಗೆ
ಕಡ್ಲೆಬೇಳೆ
ಉಪ್ಪು
ಸಾಂಬಾರ್ ಪುಡಿ
ಗರಂ ಮಸಾಲಾ
ಖಾರದಪುಡಿ
ಮಾಡುವ ವಿಧಾನ
ಮೊದಲು ಪಾಲಕ್ ಸೊಪ್ಪನ್ನು ನೀರಿಗೆ ಹಾಕಿ ಬಿಸಿ ಮಾಡಿ ಮತ್ತೆ ತಣ್ಣೀರು ಹಾಕಿ ರುಬ್ಬಿ ಇಡಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಹಾಕಿ
ನಂತರ ಈರುಳ್ಳಿ, ಹಸಿಮೆಣಸು ಹಾಕಿ ಮಿಕ್ಸ್ ಮಾಡಿ
ಅದು ಬೆಂದ ನಂತರ ಸೊಪ್ಪು ಪ್ಯೂರಿ ಹಾಕಿ
ನಂತರ ಅದಕ್ಕೆ ಉಪ್ಪು, ಗರಂ ಮಸಾಲಾ, ಖಾರದಪುಡಿ, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿ
ಎಣ್ಣೆ ಬಿಟ್ಟ ನಂತರ ಅದಕ್ಕೆ ಅನ್ನ ಮಿಕ್ಸ್ ಮಾಡಿದ್ರೆ ಪಾಲಕ್ ರೈಸ್ ರೆಡಿ