ಬಿಯರ್‌ ಇಲ್ಲದೆ ಬರಗೆಟ್ಟ ಬೆಂಗಳೂರು, ವೀಕೆಂಡ್‌ ಆಫರ್ಸ್‌ ಇಲ್ವೇ ಇಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ಯಾರೂ ಅಂದುಕೊಳ್ಳದ ಸಮಸ್ಯೆ ಶೀಘ್ರವೇ ಎದುರಾಗಲಿದೆ, ಯಾವುದು ಗೊತ್ತಾ? ಬಿಯರ್‌ ಬಿಕ್ಕಟ್ಟು ಸಮಸ್ಯೆ!!

ಮಾರುಕಟ್ಟೆ ಮೂಲಗಳ ಅನ್ವಯ  ಬೆಂಗಳೂರಿನಲ್ಲಿ ಬಿಯರ್‌ಗೆ ಬೇಡಿಕೆ ಹೆಚ್ಚಾಗಿದ್ದು, ಇನ್ನು ಪಬ್‌ ಹಾಗೂ ಬಾರ್‌ಗಳಲ್ಲಿ ವೀಕೆಂಡ್‌ ಯಾವುದೇ ಆಫರ್‌ ಇರುವುದಿಲ್ಲ.

ಕುಸಿದ ಪೂರೈಕೆಯೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ನಗರದ ಪಬ್‌ಗಳು ಮತ್ತು ಬ್ರೂವರೀಸ್​ಗಳಲ್ಲಿ  ಬೇಡಿಕೆ ಗಣನೀಯವಾಗಿ ಹೆಚ್ಚಳವಾಗಿದೆ. ಆದರೆ, ಅದಕ್ಕೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ. ಚಿಲ್ಲರೆ ಮಾರಾಟದ ಅಂಗಡಿಗಳಲ್ಲಿ ದಾಸ್ತಾನು ಮರುಸ್ಥಾಪಿಸುವಲ್ಲಿ ಕೂಡ ವಿಳಂಬವಾಗುತ್ತಿದೆ.

ಪೂರೈಕೆ ಸಮಸ್ಯೆಯ ಕಾರಣ ಅನೇಕ ಪಬ್‌ಗಳು ಮತ್ತು ಬ್ರೂವರೀಸ್‌ಗಳು ವಾರಾಂತ್ಯದ ಕೊಡುಗೆಗಳನ್ನು ನಿಲ್ಲಿಸಲು ಮುಂದಾಗಿವೆ. ಶೀಘ್ರದಲ್ಲೇ ಇದು ಜಾರಿಯಾಗಬಹುದು. 2 ಖರೀದಿಸಿದರೆ ಒಂದು ಉಚಿತ ಅಥವಾ ಒಂದು ಖರೀದಿಸಿದರೆ ಮತ್ತೊಂದು ಉಚಿತ ಇತ್ಯಾದಿ ಆಫರ್​​ಗಳನ್ನು ನಿಲ್ಲಿಸಲು ಪಬ್​ಗಳು ಮುಂದಾಗಿವೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!