November 11, 2026
Wednesday, November 11, 2026
spot_img

ಮಲೆನಾಡಿನ ಸ್ಪೆಷಲ್‌ ಹಲಸಿನ ಹಪ್ಪಳ ತಿಂದಿದ್ದೀರಾ? ಸುಲಭವಾದ ರೆಸಿಪಿ ಇಲ್ಲಿದೆ ನೋಡಿ

ಸಾಮಾಗ್ರಿಗಳು

ಚೆನ್ನಾಗಿ ಹಣ್ಣಾದ ಹಲಸಿನ ಹಣ್ಣು
ಅಕ್ಕಿ ಹಿಟ್ಟು
ಬೆಲ್ಲ
ಏಲಕ್ಕಿ ಪುಡಿ
ಉಪ್ಪು
ಎಳ್ಳು

ಮಾಡುವ ವಿಧಾನ

ಹಲಸಿನ ತೊಳೆಗಳಿಂದ ಬೀಜ ತೆಗೆದು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ತದನಂತರ ಅದಕ್ಕೆ ಏಲಕ್ಕಿ, ಉಪ್ಪು ಎಳ್ಳು ಹಾಕಿ.

ಆಮೇಲೆ ಅದಕ್ಕೆ ಅಕ್ಕಿ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ. ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾದ ಹಿಟ್ಟನ್ನು ತಯಾರಿಸಿ.

ನಂತರ ಪ್ಲಾಸ್ಟಿಕ್‌ ಶೀಟ್‌ ಅಥವಾ ಎಣ್ಣೆ ಸವರಿದ ಬಟ್ಟೆಯ ಮೇಲೆ ಚಿಕ್ಕ ಉಂಡೆ ಇಡಿ. ಕೈಯಿಂದ ಅಥವಾ ಸಣ್ಣ ಬಟ್ಟಲಿನ ಸಹಾಯದಿಂದ ತೆಳುವಾಗಿ ತಟ್ಟಿ.

ಬಿಸಿಲಿನಲ್ಲಿ ಸಂಪೂರ್ಣ ಒಣಗುವವರೆಗೆ ಒಣಗಿಸಿ. ಸಾಮಾನ್ಯವಾಗಿ 2–3 ದಿನ ಬೇಕಾಗಬಹುದು. ಹವಾಮಾನಕ್ಕೆ ಅನುಗುಣವಾಗಿ ಬದಲಾಗುತ್ತದೆ. ಒಣಗಿದ ಹಪ್ಪಳವನ್ನು ಬಿಸಿ ಎಣ್ಣೆಯಲ್ಲಿ ಹಾಕಿ. ಉಬ್ಬಿ ಗರಿಗರಿಯಾದಾಗ ತೆಗೆದುಹಾಕಿ.

Must Read