ಒಂದು ವರ್ಷದಿಂದಲೇ ಸೇವಂತಿ ಪರಿಚಯ ಇತ್ತು, ಎಳೆಎಳೆಯಾಗಿ ಸತ್ಯ ಬಿಚ್ಚಿಟ್ಟ ಸೋನು ಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಗ್‌ಬಾಸ್‌ ಖ್ಯಾತಿಯ ಸೋನು ಗೌಡ ದಾಖಲೆಗಳಿಲ್ಲದೆ ಮಗುವನ್ನು ದತ್ತು ಪಡೆದ ಆರೋಪದಲ್ಲಿ ಕಸ್ಟಡಿಯಲ್ಲಿ ಇದ್ದಾರೆ.

ಪೊಲೀಸರ ಮುಂದೆ ಮಗುವನ್ನು ಕರೆದುಕೊಂಡು ಬರುವ ಮುಂದೆ ಏನೆಲ್ಲಾ ಮಾಡಿದ್ದೆ ಎನ್ನುವ ಮಾಹಿತಿಯನ್ನು ಸೋನು ಬಿಚ್ಚಿಟ್ಟಿದ್ದಾರೆ.

ನಾನು ವಾಸವಿರುವ ಅಪಾರ್ಟ್‌ಮೆಂಟ್‌ ಪಕ್ಕವೇ ಮನೆ ಕಟ್ಟುತ್ತಿದ್ದರು. ಅಲ್ಲಿಗೆ ಕೂಲಿ ಕೆಲಸಕ್ಕಾಗಿ ಸೇವಂತಿ ಫ್ಯಾಮಿಲಿ ಬಂದಿತ್ತು. ಅವರಿಗೆ ನಾಲ್ಕು ಮಕ್ಕಳು. ಒಂದು ಗಂಡು ಮೂರು ಹೆಣ್ಣುಮಕ್ಕಳು.

ಸೇವಂತಿ ಆಗಾಗ ನಮ್ಮ ಮನೆ ಕಡೆ ಬಂದು ತಿನ್ನೋದಕ್ಕೆ ಏನಾದ್ರೂ ಕೇಳುತ್ತಿದ್ದಳು. ಪ್ರತೀ ದಿನ ನಾನು ಅದನ್ನು ಕೊಡುತ್ತಿದ್ದೆ. ಹೀಗೆ ನಮ್ಮ ನಡುವೆ ಒಂದು ವರ್ಷದಿಂದ ಉತ್ತಮ ಬಾಂಧವ್ಯ ಬೆಳೆದಿತ್ತು.

ಕೆಲಸ ಮುಗಿದ ನಂತರ ಅವರೆಲ್ಲರೂ ರಾಯಚೂರಿಗೆ ಹೋಗಿದ್ದರು. ನಾನು ಒಂಟಿಯಾಗಿ ಬದುಕುತ್ತಿದ್ದೀನಿ ಅದಕ್ಕೆ ಮಗುಗೂ ಒಂದು ಬಾಳು ಕೊಟ್ಟಂತೆ ಆಗುತ್ತದೆ. ನನಗೂ ಒಂದು ಜೊತೆ ಆಗುತ್ತದೆ ಎಂದು ಅವರಿಗೆ ಫೋನ್‌ ಮಾಡಿ ಸೇವಂತಿನ ದತ್ತು ಪಡೆಯುವುದಾಗಿ ಹೇಳಿದೆ. ಅವರು ಒಪ್ಪಿಕೊಂಡಿದ್ದರು.

ನಾನು ಮಗುವನ್ನು ಮನೆಗೆ ಕರೆದುಕೊಂಡು ಬಂದು ನೋಡಿಕೊಳ್ತಿದ್ದೇನೆ ಎಂದು ಸೋನು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!