ಇದ್ದಕ್ಕಿದ್ದಂತೆ ಪಿಎಂ ಭೇಟಿಗೆ ಅವಕಾಶ ಕೋರಿದ ಎಚ್‌ಡಿಕೆ, ಅಂಥದ್ದೇನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡೋದಕ್ಕೆ ಅಪಾಂಯ್ಟ್‌ಮೆಂಟ್ ಪಡೆದಿದ್ದಾರೆ.
ಹೌದು, ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಮತ್ತು ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಗಳಲ್ಲಿ ಅಕ್ರಮವಾಗಿದೆ ಎಂದು ಎಚ್‌ಡಿಕೆ ಹೇಳುತ್ತಿದ್ದು, ಈ ಬಗ್ಗೆ ಮಾತನಾಡಲು ಪ್ರಧಾನಿ ಭೇಟಿ ಅವಕಾಶಕ್ಕೆ ಮನವಿ ಮಾಡಿದ್ದಾರೆ.

ನೈಸ್ ಅಕ್ರಮದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಏಜೆನ್ಸಿಯಿಂದ ತನಿಖೆಗೆ ನಿರ್ದೇಶನ ಮಾಡಬೇಕು ಎಂದ ಎಚ್‌ಡಿಕೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಎಚ್‌ಡಿಕೆ ದೆಹಲಿಯಲ್ಲಿ ಪ್ರೆಸ್‌ಮೀಟ್ ಸಾಕ್ಷಿ ಸಮೇತ ಡಾಕ್ಯುಮೆಂಟ್ಸ್ ರಿಲೀಸ್ ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಬಳಿಯೂ ನೈಸ್ ರಸ್ತೆ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಕುಮಾರಸ್ವಾಮಿ ದೂರು ನೀಡಿದ್ದಾರೆ. ಈ ಒತ್ತಾಯಕ್ಕೆ ಬಿಜೆಪಿ ಕೂಡ ಸಾಥ್ ನೀಡಿದ್ದು, ಪಿಎಂ ಭೇಟಿಗೆ ಅವಕಾಶ ಸಿಕ್ಕರೆ ಯೋಜನೆಗೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ಒದಗಿಸುವ ಚಿಂತನೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!