RECIPE| ಮನೆಯಲ್ಲೇ ಕ್ರಿಸ್ಪಿಯಾದ ಫ್ರೆಂಚ್‌ ಫ್ರೈ ತಿನ್ಬೇಕಾ? ಈ ವಿಧಾನ ಬಳಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಈಗಿನ ಯುವಜನರಲ್ಲಿ ಹೊರಗಿನ ತಿಂಡಿ ತಿನಿಸುಗಳ ಮೇಲಿನ ವ್ಯಾಮೋಹ ಜಾಸ್ತಿ. ಹಾಗಾಗಿ ಫಾಸ್ಟ್‌ಫುಡ್‌ ಕಡೆಗೆ ಹೆಚ್ಚು ಆಸಕ್ತಿ. ಅದರಲ್ಲೂ ಪಿಜ್ಜಾ, ಬರ್ಗರ್‌, ಫ್ರೆಂಚ್‌ ಫ್ರೈ ಗೆ ಮೊದಲ ಆದ್ಯತೆ. ಹಾಗಾದ್ರೆ ಮನೆಯಲ್ಲೇ ಏಕೆ ಕ್ರಿಸ್ಪಿಯಾದ ಫ್ರೆಂಚ್‌ ಫ್ರೈ ಮಾಡಿ ತಿನ್ಬಾರ್ದು ಅಲ್ವಾ? ಹಾಗಾದ್ರೆ ಕ್ರಿಸ್ಪಿಯಾದ ಫ್ರೆಂಚ್‌ ಫ್ರೈ ಮಾಡುವ ವಿಧಾನ ಇಲ್ಲಿ ತಿಳಿಯಿರಿ.

ಬೇಕಾಗುವ ಸಾಮಗ್ರಿಗಳು:

ಆಲೂಗಡ್ಡೆ
ಎಣ್ಣೆ
ಉಪ್ಪು
ಟೊಮೆಟೊ ಕೆಚಪ್

ಮಾಡುವುದು ವಿಧಾನ:

* ಮೊದಲು ದೊಡ್ಡ ಗಾತ್ರದ ಆಲೂಗಡ್ಡೆಯನ್ನು ತೆಗೆದುಕೊಂಡು ನೀರಿನಿಂದ ತೊಳೆದು ಅದರ ಸಿಪ್ಪೆ ಸುಲಿಯಿರಿ.

* ಮತ್ತೊಮ್ಮೆ ಅದನ್ನು ತೊಳೆದು 1/2 ಇಂಚಿನಷ್ಟು ದಪ್ಪವಾಗಿ ಉದ್ದುದ್ದವಾಗಿ ಕತ್ತರಿಸಿ.

* ಈಗ ಕತ್ತರಿಸಿದ ಆಲೂಗಡ್ಡೆಯನ್ನು ತಣ್ಣೀರಿನಲ್ಲಿ ಕನಿಷ್ಠಒಂದು ಗಂಟೆ ಅಥವಾ ಒಂದು ರಾತ್ರಿ ಇಡಿ.

* ನಂತರ ಮತ್ತೆ ಎರಡು ಬಾರಿ ತಣ್ಣೀರಿನಲ್ಲಿ ತೊಳೆದು ಬಟ್ಟೆಯನ್ನು ಅದ್ದಿ, ಅದರ ನೀರಿನಂಶ ತೆಗೆಯಿರಿ.

* ಈಗ ಎಣ್ಣೆಯನ್ನು ಪ್ಯಾನ್‌ಗೆ ಹಾಕಿ ಕುದಿಸಿ.

* ಎಣ್ಣೆ ಕುದಿ ಬರಲು ಪ್ರಾರಂಭಿಸಿದಾಗ ಸ್ವಲ್ಪ -ಸ್ವಲ್ಪ ಆಲೂಗಡ್ಡೆ ಹಾಕಿ. ತುಂಬಾ ಹಾಕಿದರೆ ಗರಿ ಗರಿಯಾಗುವುದಿಲ್ಲ. ಈಗ ಅದನ್ನು ಎಣ್ಣೆಯಿಂದ ತೆಗೆದು ಪೇಪರ್‌ ಟವಲ್‌ನಲ್ಲಿ ಇಡಿ.

* ಈಗ ಎಲ್ಲಾ ಒಮ್ಮೆ ಕರಿದ ಬಳಿಕ ಮತ್ತೆ ಎಣ್ಣೆ ಬಿಸಿ ಮಾಡಿ ಮತ್ತೊಮ್ಮೆ ಸ್ವಲ್ಪ -ಸ್ವಲ್ಪ ಹಾಕಿ ಎರಡು ಬಾರಿ ಕರಿಯಬೇಕು. ಆಗ ಕ್ರಿಸ್ಪಿಯಾಗಿ ಬರುತ್ತದೆ.

ಇದನ್ನು ತಟ್ಟೆಗೆ ಹಾಕಿ ಕೂಡಲೇ ಉಪ್ಪು ಉದುರಿಸಿ ಮಿಕ್ಸ್ ಮಾಡಿ ಟೊಮೆಟೊ ಕೆಚಪ್ ನೊಂದಿಗೆ ಸೇವಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!