ಹೊಸದಿಗಂತ ಡಿಜಿಟಲ್ ಡೆಸ್ಕ್:
ಚನ್ನಪಟ್ಟಣ ಉಪಚುನಾವಣೆಯಲ್ಲಿ ಪುತ್ರನ ಸೋಲಿನ ನಂತರ ಸಚಿವ ಎಚ್.ಡಿ.ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
“ಫಲಿತಾಂಶಗಳು ಬಂದಿವೆ. ಈಗ ಏನನ್ನೂ ಚರ್ಚಿಸುವುದರಲ್ಲಿ ಅರ್ಥವಿಲ್ಲ” ಎಂದು ಅವರು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ತಿಳಿಸಿದರು. ಫಲಿತಾಂಶಗಳನ್ನು ಒಪ್ಪಿಕೊಳ್ಳಬೇಕು. ಏನೇ ಇದ್ರೂ ಆಮೇಲೇ ಮಾತಾಡ್ತೇನೆ ಎಂದು ಬೇಸರದಿಂದ ಅಲ್ಲಿಂದ ಹೊರಟು ಹೋದರು.
ಚನ್ನಪಟ್ಟಣ ಉಪಚುನಾವಣೆ ಫಲಿತಾಂಶದ ನಂತರ ಯಾವುದೇ ಪ್ಲಾನ್ ಮಾಡದ ಎಚ್ ಡಿಕೆ, ಪುತ್ರ ನಿಖಿಲ್ ಜತೆ ಜೆ.ಪಿ.ನಗರದ ನಿವಾಸದಲ್ಲಿ ತಂಗಿದ್ದರು.
ನಾಳೆ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆ ಸಚಿವ ಕುಮಾರಸ್ವಾಮಿ ಇಂದೇ ದೆಹಲಿಗೆ ತೆರಳುತ್ತಿದ್ದಾರೆ. ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ಇಂದು ಮಧ್ಯಾಹ್ನ 12.30ರ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಲಿದ್ದಾರೆ.