ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಹೃದಯಾಘಾತದ ಸಂಭವವಿರುತ್ತದೆ. ಆದರೆ, ನಾವು ಸೇವಿಸುವ ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ‘ಒಳ್ಳೆಯ ಕೊಲೆಸ್ಟ್ರಾಲ್’ ಮಟ್ಟವನ್ನು ಹೆಚ್ಚಿಸಿ ಆರೋಗ್ಯವಾಗಿರಬಹುದು.
ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸುವ ಪ್ರಮುಖ ಆಹಾರಗಳು:
ಒಣಫಲಗಳು: ಬಾದಾಮಿ, ವಾಲ್‌ನಟ್ಸ್ ಮತ್ತು ಪಿಸ್ತಾಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಸಮೃದ್ಧವಾಗಿದ್ದು, ಇವು ಹೃದಯದ ಆರೋಗ್ಯಕ್ಕೆ ಪೂರಕ.
ಧಾನ್ಯಗಳು: ಓಟ್ಸ್, ರಾಗಿ ಮತ್ತು ಬಾರ್ಲಿಯಂತಹ ನಾರಿನಂಶ ಹೆಚ್ಚಿರುವ ಆಹಾರಗಳು ಕೆಟ್ಟ ಕೊಲೆಸ್ಟ್ರಾಲ್ ಹೀರಿಕೊಳ್ಳುವುದನ್ನು ತಡೆಯುತ್ತವೆ.
ಆಲಿವ್ ಎಣ್ಣೆ: ಅಡುಗೆಯಲ್ಲಿ ಸಾಧಾರಣ ಎಣ್ಣೆಯ ಬದಲಿಗೆ ಆಲಿವ್ ಎಣ್ಣೆ ಬಳಸುವುದರಿಂದ ದೇಹಕ್ಕೆ ಉತ್ತಮ ಕೊಬ್ಬಿನಂಶ ದೊರೆಯುತ್ತದೆ.
ಬೇಳೆಕಾಳುಗಳು: ಅವರೆಕಾಳು, ಕಡಲೆ ಮತ್ತು ಬೇಳೆಗಳಲ್ಲಿ ಅಧಿಕ ಪ್ರೊಟೀನ್ ಹಾಗೂ ನಾರಿನಂಶವಿದ್ದು, ಇವು ರಕ್ತದ ಶುದ್ಧೀಕರಣಕ್ಕೆ ಸಹಕಾರಿ.
ಹಣ್ಣುಗಳು: ಸೇಬು, ದ್ರಾಕ್ಷಿ ಮತ್ತು ಸಿಟ್ರಸ್ ಹಣ್ಣುಗಳಲ್ಲಿ ಪೆಕ್ಟಿನ್ ಎಂಬ ನಾರಿನಂಶವಿರುತ್ತದೆ, ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕೊಬ್ಬಿನ ಮೀನು: ಮೀನಿನಲ್ಲಿರುವ ಒಮೆಗಾ-3 ಅಂಶವು ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ.
ಕೇವಲ ಆಹಾರವಷ್ಟೇ ಅಲ್ಲದೆ, ಪ್ರತಿದಿನ 30 ನಿಮಿಷಗಳ ನಡಿಗೆ ಅಥವಾ ವ್ಯಾಯಾಮ ಮಾಡುವುದರಿಂದ HDL (High-Density Lipoprotein) ಮಟ್ಟವನ್ನು ಸುಲಭವಾಗಿ ಹೆಚ್ಚಿಸಬಹುದು.


