ಪಿಸ್ತೂಲ್ ಹಿಡಿದುಕೊಂಡು ಶಾಲೆಗೆ ಬಂದ 10ನೇ ತರಗತಿ ವಿದ್ಯಾರ್ಥಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

10ನೇ ತರಗತಿ ವಿದ್ಯಾರ್ಥಿಯೊಬ್ಬ ಪಿಸ್ತೂಲ್​ನೊಂದಿಗೆ ಶಾಲೆಗೆ ಬಂದ ಘಟನೆ ಹರಿದ್ವಾರದಲ್ಲಿ ನಡೆದಿದೆ.
ಕೆಲ ದಿನಗಳ ಹಿಂದೆ ಅದೇ ಶಾಲೆಯ 12ನೇ ತರಗತಿ ವಿದ್ಯಾರ್ಥಿಯೊಂದಿಗೆ ಜಗಳ ಮಾಡಿಕೊಂಡಿದ್ದ. ನಂತರ ಶಾಲಾ ಆಡಳಿತ ಮಂಡಳಿಗೆ ವಿಷಯ ತಲುಪಿದ್ದು, ಇಬ್ಬರೂ ಮಕ್ಕಳ ಮನವೊಲಿಸಿ ಇತ್ಯರ್ಥಪಡಿಸಿದ್ದರು.

ಶುಕ್ರವಾರ  ಹಿರಿಯ ವಿದ್ಯಾರ್ಥಿಯ ಮೇಲೆ ಸೇಡು ತೀರಿಸಿಕೊಳ್ಳಲು ಪಿಸ್ತೂಲ್ ಹಿಡಿದು 10ನೇ ತರಗತಿ ವಿದ್ಯಾರ್ಥಿ ಶಾಲೆಗೆ ಬಂದಿದ್ದಾನೆ. ಅಷ್ಟರಲ್ಲಿ ತರಗತಿಯಲ್ಲಿದ್ದ ಸಹಪಾಠಿಗಳು ಆತನ ಬಳಿ ಲೋಡೆಡ್​​ ಪಿಸ್ತೂಲ್ ನೋಡಿದ್ದಾರೆ. ಬಳಿಕ ಶಿಕ್ಷಕರಿಗೆ ಮಾಹಿತಿ ನೀಡಿದ್ದು, ಶಿಕ್ಷಕರು ವಿದ್ಯಾರ್ಥಿಯನ್ನು ಹಿಡಿದು ಆತನಿಂದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.

ಈ ಘಟನೆ ಸಿಡಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಸಿಡಿಕಲ್ ಪೊಲೀಸ್ ಠಾಣೆ ಉಸ್ತುವಾರಿ ಪ್ರಮೋದ್ ಉನಿಯಾಲ್ ಅವರು ವಿದ್ಯಾರ್ಥಿಯನ್ನು ವಿಚಾರಣೆ ನಡೆಸಿದಾಗ ಕೊಲ್ಲಲು ಪಿಸ್ತೂಲ್ ಹಿಡಿದು ಬಂದಿರುವುದು ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!