ಆನ್‌ಲೈನ್ ವಂಚನೆ ಮೂಲಕ ಹಣ ಕಳೆದುಕೊಂಡಿದ್ದ ನಾಲ್ವರಿಗೆ 6,43,297 ಹಣ ಮರುಪಾವತಿ ಮಾಡಿಸಿದ ಪೊಲೀಸರು!

ಹೊಸ ದಿಗಂತ ವರದಿ, ಮೈಸೂರು:

ಆನ್ ಲೈನ್ ವಂಚನೆ ಮೂಲಕ ಹಣ ಕಳೆದುಕೊಂಡಿದ್ದ ಮತ್ತೆ ನಾಲ್ವರಿಗೆ ಪೊಲೀಸರು ಒಟ್ಟು 6,43,297 ರೂಗಳನ್ನು ವಾಪಾಸ್ ಕೊಡಿಸಿದ್ದಾರೆ.
ಮೈಸೂರಿನ ವಿಜಯನಗರದ ಚಂದ್ ಮತ್ತು ಸುನೀತಾ ಲಾಲ್ ಚಂದ್ ಎಂಬುವರಿoದ ಕೆವೈಸಿ ಆಪ್ಡೇಟ್ ಎಂದು ಒಟಿಪಿ ಪಡೆದು ಒಟ್ಟು 4,49,100 ರೂ, ವಿದ್ಯಾರಣ್ಯಪುರಂನ ಚಂದ್ರು ಎನ್ ಎಂಬುವರಿoದ ಕೆವೈಸಿ ಅಪ್ಡೇಟ್ ಮಾಡಲು ಬ್ಯಾಂಕ್ ಖಾತೆಯ ಮಾಹಿತಿ ಪಡೆದು ಒಟ್ಟು 1,69,199 ರೂ, ದಟ್ಟಗಳ್ಳಿಯ ನಿವಾಸಿ ರವಿ ಹೆಬ್ಬರ್‌ಗೆ ಬ್ಯಾಂಕ್‌ನವರು ಎಂದು ಹೇಳಿ ಒಟ್ಟು 22,999 ರೂ, ಹಿನಕಲ್‌ನ ಪ್ರೇಮ್ ದಾಸ್ ರಿಗೆ ಡೆಬಿಟ್ ಕಾರ್ಡ್ ಮೂಲಕ ರಿಚಾರ್ಜ್ ಎಂದು ಒಟ್ಟು 1,999 ರೂ ಹಣವನ್ನು ವಂಚಿಸಲಾಗಿತ್ತು. ಈ ಬಗ್ಗೆ ಸಿಇಎನ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, 4 ಪ್ರತ್ಯೇಕ ಪ್ರಕರಣಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿನ ಆರೋಪಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದ್ದ ಒಟ್ಟು 6,43,297 ರೂ ಹಣವನ್ನು ಸೆನ್ ಕ್ರೈo ಪೊಲೀಸ್ ಠಾಣೆಯ ಕ್ವಿಕ್ ರೆಸ್ಪಾಂನ್ಸ್ ಟೀಮ್‌ನ ಸಿಬ್ಬಂದಿಗಳು ತ್ವರಿತವಾಗಿ ಕ್ರಮ ಕೈಗೊಂಡು, ಸಂಬoಧ ಪಟ್ಟ ಬ್ಯಾಂಕ್ ಮ್ಯಾನೇಜರ್, ನೋಡಲ್ ಆಫೀಸರ್, ಮತ್ತು ಕೋರ್ ಬ್ಯಾಂಕಿoಗ್‌ನ ಲೀಗಲ್ ಟೀಮ್ ರವರನ್ನು ಸಂಪರ್ಕಿಸಿ ಆರೋಪಿಗಳ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿಸಿ, ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಹಣ ಕಳೆದುಕೊಂಡವರಿಗೆ ಹಿಂದಿರುಗಿಸಿದ್ದಾರೆ
ಈ ಕಾರ್ಯವನ್ನು ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ, ಮಾರ್ಗದರ್ಶನದಲ್ಲಿ ಮೈಸೂರು ನಗರ ಸೆನ್ ಕ್ರೈo ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಯಕುಮಾರ್.ಎನ್, ಪಿ.ಎಸ್.ಐ.ಗಳಾದ ಅನಿಲ್‌ಕುಮಾರ್, ಸಿದ್ದೇಶ್ ಎಂ.ಎಲ್. ಮತ್ತು ಸಿಬ್ಬಂದಿಗಳು ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!