ತನ್ನ, ಮಕ್ಕಳನ್ನು ಬೀದಿಗೆ ಹಾಕಿದ್ದಾನೆ: ಬಾಲಿವುಡ್ ನಟ ನವಾಜುದ್ದೀನ್ ವಿರುದ್ಧ ಪತ್ನಿ ಆರೋಪ!

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ದಾಂಪತ್ಯ ಕಲಹ ಬೀದಿಗೆ ಬಂದಿದೆ. ಪತ್ನಿ ಅಲಿಯಾ ನವಾಜುದ್ದೀನ್ ಮೇಲೆ ಸಾಲು ಸಾಲು ಅರೋಪಗಳನ್ನು ಮಾಡುತ್ತಿದ್ದಾರೆ.

ಇದೀಗ ಬೀದಿಯಲ್ಲಿ ನಿಂತು ವಿಡಿಯೋ ಮಾಡಿ ಆರೋಪ ಮಾಡಿದ ಅಲಿಯಾ, ತನ್ನನ್ನು ಮತ್ತು ಮಕ್ಕಳನ್ನು ಬೀದಿಗೆ ಹಾಕಿದ್ದಾನೆ ಎಂದು ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ.

ಕಳೆದ ವಾರ ಅಲಿಯಾ ಇಬ್ಬರು ಮಕ್ಕಳಾದ ಶೋರಾ ಮತ್ತು ಯಾನಿ ಅವರೊಂದಿಗೆ ನವಾಜುದ್ದೀನ್ ಅವರ ಅಂಧೇರಿ ಬಂಗಲೆಯಲ್ಲಿ ಉಳಿದುಕೊಂಡಿರುವುದಾಗಿ ಹೇಳಿದ್ದರು. ಅಲ್ಲಿ ಯಾವುದೇ ಸೌಲಭ್ಯವಿಲ್ಲ, ಸ್ನಾನ ಮಾಡಲು ಬಿಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಇದೀಗ ಮಕ್ಕಳನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ಆರೋಪಿಸಿ ವಿಡಿಯೋ ಮಾಡಿದ್ದಾರೆ.

ತನ್ನ ಬಂಗಲೆ ಪ್ರವೇಶಿಸದಂತೆ ಬಾಡಿಗಾರ್ಡ್ ನಿಯೋಜಿಸಿದ್ದಾರೆ . ಇಬ್ಬರು ಮಕ್ಕಳೊಂದಿಗೆ ನವಾಜುದ್ದೀನ್ ಮನೆ ಮುಂದೆ ರಸ್ತೆಯಲ್ಲಿ ನಿಂತಿದ್ದಾರೆ. ಮಗ ಯಾನಿಯನ್ನು ಹತ್ತಿರದಲ್ಲೇ ಪಕ್ಕದಲ್ಲೇ ನಿಲ್ಲಿಸಿಕೊಂಡಿದ್ದಾರೆ ಮಗಳು ಶೋರಾ ಜೋರಾಗಿ ಅಳುತ್ತಿದ್ದಾಳೆ. ಇಬ್ಬರೂ ಮಕ್ಕಳನ್ನು ಸಹ ಬಂಗಲೆಯಿಂದ ಹೊರಹಾಕಿದ್ದಾರೆ. ಮನೆಯೊಳಗೆ ಪ್ರವೇಶಿಸಲು ಬಿಡುತ್ತಿಲಲ್ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ತನ್ನ ಕೇವಲ 81 ರೂಪಾಯಿ ಇದೆ. ಎಲ್ಲಿಯೂ ಹೋಗಿಲ್ಲ ಎಂದಿದ್ದಾರೆ.

https://www.instagram.com/p/CpULOBjDnm4/?utm_source=ig_embed&ig_rid=1a08ee80-ba5c-4740-9748-9dc81b081b88

ನವಾಜ್ ಹೀಗೆ ವರ್ತಿಸುತ್ತಾರೆಂದು ನನಗೆ ತಿಳಿದಿಲ್ಲ. ಅವನು ತುಂಬಾ ಕೆಳಮಟ್ಟಕ್ಕೆ ಇಳಿದಿದ್ದಾನೆ. ನವಾಜ್ ನೀನು ನನ್ನ ಮಕ್ಕಳಿಗೆ ಈ ರೀತಿ ಮಾಡುತ್ತಿರುವುದಕ್ಕೆ ನಾನು ಯಾವತ್ತು ನಿನ್ನನ್ನು ಕ್ಷಮಿಸಲ್ಲ. ಈ ವಿಡಿಯೋ ಮೂಲಕ ನನ್ನ ಮಕ್ಕಳು ಹೇಗೆ ಬೀದಿಯಲ್ಲಿ ನಿಂತಿದ್ದಾರೆ, ನರಳುತ್ತಿದ್ದಾರೆ ಎಂದು ನೋಡಿ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!