ಹಿಂಡೆನ್‌ಬರ್ಗ್‌ ವರದಿ: ಇಂದು ಸುಪ್ರೀಂಕೋರ್ಟ್‌ ನಲ್ಲಿ ವಿಚಾರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅದಾನಿ ಕುರಿತಾದ ಹಿಂಡೆನ್‌ಬರ್ಗ್‌ ವರದಿ ವಿವಾದಕ್ಕೆ ಸಂಬಂಧಪಟ್ಟಂತೆ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ವು ತನಿಖೆ ಪೂರ್ಣಗೊಳಿಸುವ ಅವಧಿಯನ್ನು ವಿಸ್ತರಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್‌‌ ಇಂದು ವಿಚಾರಣೆ ನಡೆಸಲಿದೆ.

ತನಿಖೆ ಪೂರ್ಣಗೊಳಿಸುವ ಅವಧಿಯನ್ನು ಆರು ತಿಂಗಳಿಗೆ ವಿಸ್ತರಿಸುವಂತೆ ಸೆಬಿ ಕೇಳಿದೆ. ಮುಖ್ಯನ್ಯಾಯಮೂರ್ತಿ ಚಂದ್ರಚೂಡ್‌ ನೇತೃತ್ವದ ಪೀಠವು ಇಂದು ಈ ಪ್ರಕರಣದ ಕುರಿತು ವಿಚಾರಣೆ ನಡೆಸಲಿದೆ.

ಹಿಂಡೆನ್‌ಬರ್ಗ್‌ ವರದಿ ಅನುಸಾರ ಅದಾನಿ ಗ್ರೂಪ್‌ನಿಂದ ಯಾವುದಾದರೂ ಭದ್ರತಾ ಕಾನೂನಿನ ಉಲ್ಲಂಘನೆಯಾಗಿದೆಯೇ ಎಂದು ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್‌ ಸೆಬಿಗೆ ನಿರ್ದೇಶನ ನೀಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!