ಅಂತಕನ ದೂತರಿಗೆ ಕಿಂಚಿತ್ತೂ ದಯೆಯಿಲ್ಲ… ಹೃದಯಾಘಾತದಿಂದ ಹರ್ಷ ಅತ್ತೆ ಸಾವು

ಹೊಸದಿಗಂತ ಆನ್‌ಲೈನ್ ಡೆಸ್ಕ್

ಭಾನುವಾರವಷ್ಟೇ ಮನೆಯ ಭವಿಷ್ಯದಂತಿದ್ದ ಬಜರಂಗದಳ ಕಾರ್ಯಕರ್ತ ಹರ್ಷನನ್ನು ಕಳೆದುಕೊಂಡ ಕುಟುಂಬ ಸೋಮವಾರ ಮತ್ತೊಂದು ಬಿಗ್ ಶಾಕ್‌ನಿಂದಾಗಿ ಅಕ್ಷರಶಃ ನಲುಗಿಹೋಗಿದೆ.
ಹರ್ಷ ಸಾವಿನ ಸುದ್ದಿ ಕೇಳಿ ಅವರ ಅತ್ತೆ ಹೃದಯಾಘಾತಕ್ಕೆ ಒಳಗಾಗಿದ್ದು, ಚಿಕಿತ್ಸೆಗೆ ಒಳಪಡಿದರೂ ಅವರನ್ನು ಉಳಿಸಿಕೊಳ್ಳುವುದು ಸಾಧ್ಯವಾಗಿಲ್ಲ.  ಹರ್ಷನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಆಘಾತಕ್ಕೊಳಗಾದ ಅತ್ತೆ ಜಲಜಾಕ್ಷಮ್ಮ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಒಂದೆಡೆ ಮನೆ ಹುಡುಗನ ಸಾವಿನ ಸುದ್ದಿಗೆ ತಲ್ಲಣಿಸಿಹೋಗಿದ್ದ ಕುಟುಂಬಕ್ಕೆ ಮನೆಯಲ್ಲಿ ಘಟಿಸಿದ ಮತ್ತೊಂದು ಸಾವು ಬರಸಿಡಿಲಾಗಿ ಬಂದೆರಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!