Wednesday, October 5, 2022

Latest Posts

ಜೈಲಿನ ಖೈದಿಗೆ ನೀಡಲು ಚಿಕನ್‌ ಪೀಸ್‌ ನಲ್ಲಿ ಗಾಂಜಾ ಇರಿಸಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದ!

ಹೊಸದಿಗಂತ ವರದಿ, ವಿಜಯಪುರ 
ಜೈಲಿನ ವಿಚಾರಣಾಧೀನ ಕೈದಿಗಾಗಿ ಚಿಕನ್‌ ಪೀಸ್‌ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗಾಂಜಾವನ್ನು ಜೈಲು ಭದ್ರತಾ ಸಿಬ್ಬಂದಿ (ಕೆಎಸ್ ಐಎಸ್ ಎಫ್) ಜಪ್ತಿ ಮಾಡಿದ ಘಟನೆ ನಗರ ಹೊರ ವಲಯ ದರ್ಗಾ ಜೈಲಿನ ಆವರಣದ ಮುಖ್ಯದ್ವಾರದ ಬಳಿ ನಡೆದಿದೆ.
ಪ್ರಜ್ವಲ್ ಲಕ್ಷ್ಮಣ ಮಾಬರುಖಾನೆ ಸಿಕ್ಕಿಬಿದ್ದ ಆರೋಪಿ. ಜೈಲಿನ ಕೈದಿ ಶಾರುಕ್ ಖಾನ್ ತೆಗರತಿಪ್ಪಿಗೆ ಚಿಕನ್ ಪೀಸ್‌ನಲ್ಲಿ ಗಾಂಜಾ ಸಾಗಿಸುವ ವೇಳೆ ಸಿಕ್ಕಿ ಬಿದಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.
ದೊಡ್ಡ ದೊಡ್ಡ ಚಿಕನ್ ಪೀಸ್‌ನಲ್ಲಿ ಇರಿಸಲಾಗಿದ್ದ 2 ಗ್ರಾಂನ 18 ಗಾಂಜಾ ಪಾಕೇಟ್ ಸೇರಿ ಒಟ್ಟು 27 ಗ್ರಾಂನ ಗಾಂಜಾ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!