ಕಾಶ್ಮೀರಿ ಪಂಡಿತರ ಹತ್ಯೆ ರೂವಾರಿ ಬಿಟ್ಟಾ ಕರಾಟೆ ಪತ್ನಿ ಸೇರಿದಂತೆ ನಾಲ್ವರು ಸರ್ಕಾರಿ ನೌಕರರನ್ನು ವಜಾಗೊಳಿಸಿದ ಕಾಶ್ಮೀರ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಭಯೋತ್ಪಾದಕರಿಗೆ ಧನಸಹಾಯ ಮಾಡಿರುವ ಆರೋಪ ಎದುರಿಸುತ್ತಿರುವ ಭಯೋತ್ಪಾದಕ ಬಿಟ್ಟಾ ಕರಾಟೆ ಅವರ ಪತ್ನಿ ಸೇರಿದಂತೆ ನಾಲ್ವರು ಸರ್ಕಾರಿ ನೌಕರರನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತ ವಜಾಗೊಳಿಸಿದೆ.

ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವುದಕ್ಕಾಗಿ ನಾಲ್ವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ವಜಾಗೊಂಡ ನಾಲ್ವರು ಉದ್ಯೋಗಿಗಳಲ್ಲಿ ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಅವರ ಪುತ್ರ ಸೈಯದ್ ಅಬ್ದುಲ್ ಮುಯೀದ್ ಕೂಡ ಸೇರಿದ್ದಾರೆ ಎನ್ನಲಾಗಿದೆ.

ಬಿಟ್ಟಾ ಕರಾಟೆ 1990 ರ ದಶಕದಲ್ಲಿ ಅನೇಕ ಕಾಶ್ಮೀರಿ ಪಂಡಿತರನ್ನು ಕೊಂದ ಆರೋಪ ಹೊತ್ತಿದ್ದಾನೆ. ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್‌ನ ಉನ್ನತ ಕಮಾಂಡರ್ ಆಗಿದ್ದ ಆತನನ್ನು ಜೂನ್ 1990 ರಲ್ಲಿ ಬಂಧಿಸಲಾಯಿತು.
16 ವರ್ಷಗಳ ಕಾಲ ವಿವಿಧ ಜೈಲುಗಳಲ್ಲಿ ಕಳೆದ ನಂತರ ಅಕ್ಟೋಬರ್ 24, 2006 ರಂದು ಜಮ್ಮುವಿನ ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.. ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ 2019 ರಲ್ಲಿ ಆತನನ್ನು ಮತ್ತೆ ಬಂಧಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!