Saturday, September 23, 2023

Latest Posts

ವಿವಿಧೆಡೆ ಮನೆಗಳ್ಳತನ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಮೂವರು ಆರೋಪಿಗಳ ಬಂಧನ

ಹೊಸ ದಿಗಂತ ವರದಿ, ದಾವಣಗೆರೆ:

ಹರಿಹರ, ರಾಣೆಬೆನ್ನೂರು, ಹಾವೇರಿ, ಖಾನಾಪುರ, ನಿಪ್ಪಾಣಿ, ಸಂಕೇಶ್ವರ ಸೇರಿದಂತೆ ವಿವಿಧೆಡೆ 10 ಮನೆಗಳ್ಳತನ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಮೂವರುಆರೋಪಿಗಳನ್ನು ಬಂಧಿಸಿರುವ ಹರಿಹರ ಪೊಲೀಸರು, ಬಂಧಿತರಿಂದ 22 ಲಕ್ಷ ರೂ.ಗಳಿಗೂ  ಅಧಿಕ ಮೌಲ್ಯದ ಚಿನ್ನಾಭರಣ ಜಪ್ತು ಮಾಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರ ಮೂಲದ ಮೂವರು ಆರೋಪಿಗಳು ನಿಪ್ಪಾಣಿ, ಸಂಕೇಶ್ವರ, ಖಾನಾಪುರ, ಹರಿಹರ, ಹಾವೇರಿ, ರಾಣೆಬೆನ್ನೂರಿನಲ್ಲಿ ಬೀಗ ಹಾಕಿದ್ದ ಮನೆಗಳನ್ನೇ ಗುರಿಯಾಗಿಟ್ಟುಕೊಂಡು ತಮ್ಮ ಕೈಚಳಕ ತೋರುತ್ತಿದ್ದರು. ಈ
ನಟೋರಿಯಸ್ ಕಳ್ಳರ ತಂಡವು ಇದೇ ಮೊದಲ ಸಲ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದೆ ಎಂದು ತಿಳಿಸಿದರು.
ಕಳ್ಳರ ತಂಡದ ಬಂಧನದೊಂದಿಗೆ 10 ಕಳ್ಳತನ ಪ್ರಕರಣ ಪತ್ತೆಯಾದಂತಾಗಿದೆ. ಹೆಚ್ಚುವರಿ ಎಸ್ಪಿ ರಾಮಗೊಂಡ ಬಸರಗಿ, ಡಿವೈಎಸ್ಪಿಗಳಾದ ಕನ್ನಿಕಾ ಸಕ್ರಿವಾಲ್, ಬಸವರಾಜ, ರುದ್ರೇಶ, ಹರಿಹರ ವೃತ್ತ ನಿರೀಕ್ಷಕ ಸತೀಶ ಕುಮಾರ, ಪಿಎಸ್ಐ ಸುನಿಲ್ ಬಿ.ತೇಲಿ, ಲತಾ ತಾಳೇಕರ್, ಮಂಜುನಾಥ ಕಲ್ಲೇದೇವರು, ಯಾಸೀನ್‌ವುಲ್ಲಾ, ನಾಗರಾಜ ಸುಣಗಾರ, ಹನುಮಂತ ಗೋಪನಾಳ್, ಶಿವರಾಜ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!