HEALTH | ಸವಿಯಲು ಬಲು ರುಚಿ ಚುಕ್ಕಿ ಬಾಳೆಹಣ್ಣು, ಆರೋಗ್ಯಕ್ಕೂ ಅಷ್ಟೇ ಹಿತಕರ ಪ್ರಯೋಜನ ನೀಡುತ್ತೆ

ಆಗಿನ ಕಾಲದಲ್ಲಿ ಮನೆಯಲ್ಲೇ ಬೆಳೆಯುತ್ತಿದ್ದ ಚುಕ್ಕಿ ಬಾಳೆಹಣ್ಣು ಈಗ ತೀರಾ ಅಪರೂಪ. ಕೆಲವೆಡೆ ವರ್ಷದ ನಿರ್ದಿಷ್ಟ ಸಮಯದಲ್ಲಿ ಮಾತ್ರ ದೊರೆಯುವ ಈ ಬಾಳೆಹಣ್ಣು ದೇಹವನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಶಕ್ತಿಯನ್ನು ನೀಡುತ್ತದೆ.

ಈ ಬಾಳೆಹಣ್ಣನ್ನು ತಿನ್ನುವ ಮೂಲಕ ನೀವು ಮಧ್ಯಾಹ್ನದ ಊಟವನ್ನು ಸಹ ಬಿಡಬಹುದು ಎಂದು ನೀವು ಕೇಳಿರಬಹುದು. ಬಾಳೆಹಣ್ಣುಗಳು ತ್ವರಿತವಾಗಿ ಜೀರ್ಣವಾಗುವುದರಿಂದ, ಇದು ಮಲಬದ್ಧತೆಯ ಸಮಸ್ಯೆಗಳನ್ನು ತಡೆಯುತ್ತದೆ. ಹೊಟ್ಟೆಯ ಸಮಸ್ಯೆ, ಎದೆಯುರಿಯಿಂದ ಬಳಲುತ್ತಿದ್ದರೆ, ಬಾಳೆಹಣ್ಣು ತಿನ್ನಲು ಪ್ರಯತ್ನಿಸಿ.

ಶೀತದಿಂದ ಬಳಲುತ್ತಿರುವವರು ಮಧ್ಯಾಹ್ನದ ಊಟದ ನಂತರ ಬಾಳೆಹಣ್ಣನ್ನು ಸೇವಿಸಿದರೆ ಲೋಳೆಯ ಸಮಸ್ಯೆ ದೂರವಾಗುತ್ತದೆ. ಹೊಟ್ಟೆ ಹುಣ್ಣು ಇದ್ದರೂ ಬಾಳೆಹಣ್ಣು ತಿಂದರೆ ಸಮಸ್ಯೆ ನಿವಾರಣೆಯಾಗುತ್ತದೆ.

ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದು ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯುವಿಕೆಯ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ.

ಈ ಚುಕ್ಕಿ ಬಾಳೆಹಣ್ಣಿನ ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು ಇರುವುದರಿಂದ ಇದನ್ನು ಪ್ರತಿದಿನ ಸೇವಿಸಿ. ಮಕ್ಕಳಿಗೂ ನೀಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!