SHOCKING | ಪತ್ನಿ- ಏಳು ಮಕ್ಕಳನ್ನು ಸಾಕಲು ಆಗದೆ ಕೊಚ್ಚಿ ಕೊಂದ ತಂದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪಾಕಿಸ್ತಾನದ ಪಂಜಾಬ್‌ನಲ್ಲಿ ಪತಿಯೊಬ್ಬ ತನ್ನ ಪತ್ನಿ ಹಾಗೂ ಮಕ್ಕಳನ್ನು ಸಾಕಲಾರದೆ ಕೊಲೆ ಮಾಡಿದ್ದಾನೆ.

ಸಜ್ಜದ್‌ ಖೋಕರ್‌ ಎಂಬಾತ ಪತ್ನಿ ಕೌಸರ್‌ ಹಾಗೂ ಏಳು ಮಕ್ಕಳನ್ನು ಕೊಲೆ ಮಾಡಿದ್ದಾನೆ. ಸಜ್ಜದ್‌ ಕೂಲಿ ಮಾಡಿ ಜೀವನ ನಡೆಸುತ್ತಿದ್ದ. ಮಕ್ಕಳನ್ನು ಸಾಕಲಾಗದೆ ಆಗಾಗ ಪತ್ನಿ ಜೊತೆ ಜಗಳವಾಡುತ್ತಿದ್ದ.

ಮಾನಸಿಕವಾಗಿ ಒತ್ತಡದಿಂದ ಬಳಲಿದ್ದ ಸಜ್ಜರ್‌ ತನ್ನ ಮಕ್ಕಳು ಹಾಗೂ ಪತ್ನಿಯನ್ನು ಮಚ್ಚಿನಿಂದ ಕೊಲೆ ಮಾಡಿದ್ದಾನೆ. ಕೌಸರ್‌ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸದ್ಯ ಸಜ್ಜದ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸಾಕಲಾರದೆ ಸಾಯಿಸಿದೆ ಎಂದು ಆತ ಹೇಳಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!