ಕರ್ಬೂಜ ಬೀಜದಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ಬೂಜ ಹಣ್ಣನ್ನು ಹಾಗೇ ತಿನ್ನಲು ನಿಮಗೆ ಅಷ್ಟೊಂದು ರುಚಿ ಅನಿಸದಿದ್ದರೂ ಇದರ ಮಿಲ್ಕ್‌ಶೇಕ್‌, ಜ್ಯೂಸ್‌ ತುಂಬಾನೇ ರುಚಿಯಾಗಿರುತ್ತೆ ಎಂದು ಎಲ್ಲರೂ ಇಷ್ಟಪಡುತ್ತಾರೆ. ಇದು ಸೀಸನಲ್‌ ಫುಡ್‌ ಆಗಿರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಕರ್ಬೂಜ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿ ನೀರಿನಂಶ ಕಾಪಾಡಲು ತುಂಬಾನೇ ಸಹಕಾರಿ. ಅಲ್ಲದೆ ಕರ್ಬೂಜ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಕಣ್ಣಿನ ಆರೋಗ್ಯಕ್ಕೆ ಪೂರಕ, ಹೃದಯದ ಆರೋಗ್ಯಕ್ಕೆ , ಹೊಟ್ಟೆಯ ಆರೋಗ್ಯಕ್ಕೆ, ಮಾನಸಿಕ ಒತ್ತಡ ಕಡಿಮೆ ಮಾಡಲು ಈ ಹಣ್ಣು ತುಂಬಾನೇ ಸಹಕಾರಿಯಾಗಿದೆ.

ಹಣ್ಣನ್ನು ಕತ್ತರಿಸುವಾಗ ಯಾವುದೇ ಚಿಂತೆಯಿಲ್ಲದೆ ಬೀಜಗಳನ್ನು ಬಿಸಾಡುತ್ತೇವೆ, ಇನ್ಮುಂದೆ ಬೀಜಗಳನ್ನು ಎಸೆಯಲೇಬೇಡಿ, ನೀವು ಈ ಬೀಜವನ್ನು ಒಣಗಿಸಿ ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಕರ್ಬೂಜ ಬೀಜದಲ್ಲಿ ವಿಟಮಿನ್ ಸಿ ಅಧಿಕವಿದೆ. ಆದ್ದರಿಂದ ಇದನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು.

ಅಜೀರ್ಣ ಅಥವಾ ಆ್ಯಸಿಡ್‌ ರಿಫ್ಲೆಕ್ಸ್ ಸಮಸ್ಯೆ ಇರುವವರು ದಿನಾ ಕರ್ಬೂಜ ಬೀಜವನ್ನು ತಿನ್ನುವುದರಿಂದ ಅಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.

ಮಲಬದ್ಧತೆ, ಅತ್ಯಧಿಕ ರಕ್ತದೊತ್ತಡ ಸಮಸ್ಯೆ ಹೊಂದಿರುವವರು ದಿನಾ ಸ್ವಲ್ಪ ಕರ್ಬೂಜ ಬೀಜ ತಿನ್ನುವುದು ಒಳಿತು.

ಇದರಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಿರುವುದರಿಂದ ಮೂಳೆ ಹಾಗೂ ಹಲ್ಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೇಸಿಗೆಯಲ್ಲಿ ಕಾಡುವ ಶೀತ, ಕೆಮ್ಮು ತಡೆಗಟ್ಟಲು ಸಹಕಾರಿ ಶೀತ-ಕೆಮ್ಮಿನ ಸಮಸ್ಯೆ ಮಳೆಗಾಲದಲ್ಲಿ ಮಾತ್ರವಲ್ಲದೆ ಬೇಸಿಗೆಯಲ್ಲಿ ಉಷ್ಣಾಂಶ ಅಧಿಕವಾದಾಗ ಕೂಡ ಉಂಟಾಗುವುದು. ಕರ್ಬೂಜ ಬೀಜ ತಿನ್ನುವುದರಿಂದ ಈ ಬಗೆಯ ಸಮಸ್ಯೆ ತಡೆಗಟ್ಟಬಹುದು. ಮೂಗು ಕಟ್ಟುವ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.

ಒಮೆಗಾ ಕೊಬ್ಬಿನಂಶ ಅತ್ಯಂತ ಆರೋಗ್ಯಕರವಾದ ಕೊಬ್ಬಿನಂಶವಾಗಿದೆ. ಇದನ್ನು ತಿನ್ನುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಗರ್ಭಿಣಿಯರಿಗೆ ತುಂಬಾನೇ ಪ್ರಯೋಜನಕಾರಿ, ಇದು ಗರ್ಭಚೀಲದಲ್ಲಿ ನೀರಿನಂಶ ಕಡಿಮೆಯಾಗದಂತೆ ಕಾಪಾಡುತ್ತದೆ. ಅಲ್ಲದೆ ತಾಯಿಯ ಆರೋಗ್ಯಕ್ಕೆ, ಮಗುವಿನ ಬೆಳವಣಿಗೆಗೆ ತುಂಬಾನೇ ಸಹಕಾರಿ.

ಮಾಂಸಾಹಾರಿಗಳಾದರೆ ಪ್ರೊಟೀನ್‌ ಅಂಶ ಮಾಂಸಾಹಾರದಲ್ಲಿ ಸಿಗುತ್ತದೆ. ಸಸ್ಯಾಹಾರಿಗಳು ಸಸ್ಯಾಧಾರಿತ ಪ್ರೊಟೀನ್ ಅಂಶಗಳ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗುವುದು. ಕರ್ಬೂಜ ಬೀಜದಲ್ಲಿ ಪ್ರೊಟೀನ್‌ ಅಧಿಕವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!