Sunday, June 4, 2023

Latest Posts

CINE| ಸಮಂತಾಗೆ ತಿಳಿಯದಂತೆ ಇನ್ಸ್ಟಾ ರೀಲ್ ಮಾಡಿದ ವಿಜಯ್: ಫ್ಯಾನ್ಸ್‌ ಫಿದಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಜಯ್ ದೇವರಕೊಂಡ ಮತ್ತು ಸಮಂತಾ ಅಭಿನಯದ ಸಿನಿಮಾ ಖುಷಿ. ರೊಮ್ಯಾಂಟಿಕ್ ಕಾಮಿಡಿ ಎಂಟರ್ಟೈನರ್ ಆಗಿ ಬರುತ್ತಿರುವ ಈ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸಿದ್ದಾರೆ. ಸಮಂತಾ ಅನಾರೋಗ್ಯದಿಂದ ತಡವಾಗಿದ್ದ ಈ ಚಿತ್ರದ ಶೂಟಿಂಗ್ ಇತ್ತೀಚೆಗಷ್ಟೇ ಮತ್ತೆ ಟ್ರ್ಯಾಕ್ ಗೆ ಬಂದಿದ್ದು, ಶರವೇಗದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರ ಸೆಪ್ಟೆಂಬರ್ 1 ರಂದು ಭಾರತದಾದ್ಯಂತ ಬಿಡುಗಡೆಯಾಗಲಿದೆ.

ಮಲಯಾಳಂ ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಅವರು ರಚಿಸಿರುವ “ನಾ ರೋಜಾ ನುವ್ವೆ, ನಾ ದಿಲ್ ಸೇ ನುವ್ವೆ” ಹಾಡು ಎಲ್ಲರನ್ನು ಆಕರ್ಷಿಸುತ್ತದೆ. ಇದು ಯೂಟ್ಯೂಬ್‌ನಲ್ಲಿ ದಾಖಲೆ ವೀಕ್ಷಣೆಗಳನ್ನು ಪಡೆಯಿತು ಮತ್ತು ವಿಶ್ವ ಅತ್ಯುತ್ತಮ ಆಡಿಯೊ ಚಾರ್ಟ್ ಬಸ್ಟರ್‌ಗಳಲ್ಲಿ ಐದನೇ ಸ್ಥಾನವನ್ನು ಆಕ್ರಮಿಸುವ ಮೂಲಕ ದಾಖಲೆಯನ್ನು ಸೃಷ್ಟಿಸಿತು. ನಿರ್ಮಾಪಕರು ಇತ್ತೀಚೆಗೆ ಶೂಟಿಂಗ್ ಸೆಟ್‌ಗಳಿಂದ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಅದರೊಂದಿಗೆ ವಿಜಯ್ ದೇವರಕೊಂಡ ಕೂಡ ಸಮಂತಾ ಜೊತೆ ಮಾಡಿದ Instagram ರೀಲ್ ಹಂಚಿಕೊಂಡಿದ್ದಾರೆ. ವಿಶೇಷ ಏನಪ್ಪಾ ಅಂದ್ರೆ, ಈ ರೀಲ್‌ ಸಮಂತಾಗೆ ತಿಳಿಯದಂತೆ ಮಾಡಿರುವುದು. ನಾ ರೋಜಾ ನುವ್ವೇ, ನಾ ದಿಲ್ ಸೇ ನುವ್ವೆ ಸಾಂಗ್ ಲಿರಿಕ್ಸ್ ಗೆ ಚಿತ್ರೀಕರಿಸಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋಗೆ ವಿಜಯ್ ಮತ್ತು ಸಮಂತಾ ಅಭಿಮಾನಿಗಳು ದಿಲ್‌ ಖುಷ್‌ ಆಗಿದ್ದಾರೆ. ಖುಷಿ ಚಿತ್ರದ ಮೂಲಕ ವಿಜಯ್ ಮತ್ತು ಸ್ಯಾಮ್ ಯಾವ ರೀತಿಯ ಫಲಿತಾಂಶವನ್ನು ನೀಡಲಿದ್ದಾರೆ ಎಂಬುದನ್ನು ನೋಡಬೇಕು.

https://www.instagram.com/reel/CsIho77Ias5/?utm_source=ig_web_copy_link

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!