May 30, 2026
Saturday, May 30, 2026
spot_img

Health Check | ನಿಮ್ಮ ದೇಹ ವಿಶ್ರಾಂತಿ ಬೇಕು ಅನ್ನೋದನ್ನು ಹೇಳುತ್ತೆ ಆದ್ರೆ ಗುರುತಿಸೋದು ಹೇಗೆ?

ಫಿಟ್ ಆಗಿರಬೇಕು ಅನ್ನೋ ಉತ್ಸಾಹದಲ್ಲಿ ಹಲವರು ದೇಹ ಕೊಡುವ ಸೂಚನೆಗಳನ್ನು ಗಮನಿಸೋದಿಲ್ಲ. ಪ್ರತಿದಿನ ವರ್ಕೌಟ್, ಬ್ಯುಸಿ ಶೆಡ್ಯೂಲ್, ಕಡಿಮೆ ನಿದ್ರೆ ಇವೆಲ್ಲದರ ನಡುವೆ ದೇಹ ಸುಸ್ತಾಗಿದ್ದರೂ ನಾವು ಅದನ್ನು ಕಡೆಗಣಿಸುತ್ತೇವೆ. ಆದರೆ ಒಂದು ಹಂತದ ನಂತರ ದೇಹವೇ “ನನಗೆ ವಿಶ್ರಾಂತಿ ಬೇಕು” ಅನ್ನೋ ಸಿಗ್ನಲ್ ಕೊಡಲು ಶುರು ಮಾಡುತ್ತದೆ. ಅದನ್ನು ಸರಿಯಾಗಿ ಗುರುತಿಸೋದು ತುಂಬಾ ಮುಖ್ಯ.

ಸರಿಯಾಗಿ ನಿದ್ರೆ ಮಾಡಿದ್ರೂ ಬೆಳಿಗ್ಗೆ ಎದ್ದಾಗ ಫ್ರೆಶ್ ಆಗಿ ಅನಿಸದೇ ಇದ್ದರೆ, ದಿನಪೂರ್ತಿ ಸುಸ್ತು ಕಾಡ್ತಿದ್ದರೆ ದೇಹ ಓವರ್‌ಲೋಡ್ ಆಗಿರಬಹುದು.

ಸಾಮಾನ್ಯವಾಗಿ ಇಷ್ಟಪಟ್ಟು ಮಾಡುವ ವ್ಯಾಯಾಮಕ್ಕೂ ಆಸಕ್ತಿ ಇಲ್ಲ ಅನ್ನಿಸಿದ್ರೆ, ಅದು ದೇಹ ಮತ್ತು ಮನಸ್ಸು ಎರಡೂ ಬ್ರೇಕ್ ಕೇಳ್ತಿವೆ ಅನ್ನೋ ಸೂಚನೆ.

ಇದನ್ನೂ ಓದಿ:

ವರ್ಕೌಟ್ ಆದ ಮೇಲೆ ಒಂದು ಅಥವಾ ಎರಡು ದಿನ ನೋವು ಸಹಜ. ಆದರೆ ನೋವು ಹೆಚ್ಚು ದಿನ ಮುಂದುವರಿದ್ರೆ ದೇಹಕ್ಕೆ ರಿಕವರಿ ಟೈಮ್ ಬೇಕು.

ಕಡಿಮೆ ನಿದ್ರೆ ಮತ್ತು ಹೆಚ್ಚು ದಣಿವು ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಚಿಕ್ಕ ವಿಷಯಕ್ಕೂ ಕೋಪ ಅಥವಾ ಕಿರಿಕಿರಿ ಬಂದರೆ ವಿಶ್ರಾಂತಿ ಅಗತ್ಯ.

ದೇಹ ತುಂಬಾ ದಣಿದಿದ್ದರೂ ನಿದ್ರೆ ಸರಿಯಾಗಿ ಬರದೇ ಇದ್ದರೆ ಅದು ಸ್ಟ್ರೆಸ್ ಅಥವಾ ಓವರ್‌ಟ್ರೈನಿಂಗ್ ಸಂಕೇತವಾಗಿರಬಹುದು.

ವಿಶ್ರಾಂತಿ ತೆಗೆದುಕೊಳ್ಳೋದು ಸೋಮಾರಿತನ ಅಲ್ಲ… ಅದು ದೇಹಕ್ಕೆ ಕೊಡುವ ಕಾಳಜಿ. ಕೆಲವೊಮ್ಮೆ ಬ್ರೇಕ್ ತೆಗೆದುಕೊಂಡಾಗಲೇ ದೇಹ ಮತ್ತೆ ಸ್ಟ್ರಾಂಗ್ ಆಗಿ ಕಮ್‌ಬ್ಯಾಕ್ ಮಾಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !