October 16, 2026
Friday, October 16, 2026
spot_img

HEALTH | ಸದಾ ಸುಸ್ತು, ತೂಕ ಹೆಚ್ಚಳವೇ? ಥೈರಾಯ್ಡ್ ಶಮನಕ್ಕೆ ದಿನ ‘ಮಖಾನಾ’ ತಿಂದ್ರೆ ಮ್ಯಾಜಿಕ್ ಗ್ಯಾರಂಟಿ

ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಿಂದ ಹಿಡಿದು ಚಿಕ್ಕ ವಯಸ್ಸಿನ ಯುವಕರವರೆಗೂ ಪ್ರತಿಯೊಬ್ಬರಿಗೂ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದು ಥೈರಾಯ್ಡ್. ದೇಹದಲ್ಲಿ ಹಾರ್ಮೋನ್ ಏರುಪೇರಾದರೆ ಮುಖದಲ್ಲಿ ಆಯಾಸ, ತೂಕ ವಿಪರೀತ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ಕೂದಲು ಉದುರುವುದು ಹೀಗೆ ಏನೇನೋ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆದರೆ, ಅಡುಗೆಮನೆಯಲ್ಲಿ ಅಥವಾ ಸೂಪರ್ ಮಾರ್ಕೆಟ್‌ನಲ್ಲಿ ಸುಲಭವಾಗಿ ಸಿಗುವ ಮಖಾನಾ ಥೈರಾಯ್ಡ್ ಆರೋಗ್ಯವನ್ನು ಹೇಗೆ ಕಾಪಾಡುತ್ತದೆ ಎಂಬುದು ನಿಮಗೆ ಗೊತ್ತಾ?

ಹಾರ್ಮೋನ್ ಸರಿದೂಗಿಸಲು ಬೆಸ್ಟ್

ನಮ್ಮ ಕುತ್ತಿಗೆ ಭಾಗದಲ್ಲಿರುವ ಥೈರಾಯ್ಡ್ ಗ್ರಂಥಿ ಸರಿಯಾಗಿ ಕೆಲಸ ಮಾಡಲು ಸೆಲೆನಿಯಮ್ ಮತ್ತು ಝಿಂಕ್ ಎಂಬ ಪೋಷಕಾಂಶಗಳು ಬಹಳ ಮುಖ್ಯ. ಮಖಾನಾದಲ್ಲಿ ಇವು ಹೇರಳವಾಗಿವೆ. ನೀವು ದಿನವೂ ನಿಗದಿತ ಪ್ರಮಾಣದಲ್ಲಿ ಮಖಾನಾ ತಿಂದರೆ, ಥೈರಾಯ್ಡ್ ಹಾರ್ಮೋನ್‌ಗಳ ಉತ್ಪಾದನೆ ಸರಿಯಾದ ಪ್ರಮಾಣದಲ್ಲಿ ನಡೆಯಲು ಇದು ನೆರವಾಗುತ್ತದೆ.

ಉರಿಯೂತ ಕಡಿಮೆ ಮಾಡುತ್ತೆ

ಥೈರಾಯ್ಡ್ ತೊಂದರೆ ಇದ್ದಾಗ ದೇಹದಲ್ಲಿ ಉರಿಯೂತ ಹೆಚ್ಚಿರುತ್ತದೆ. ಮಖಾನಾದಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು, ಇವು ಶರೀರದಲ್ಲಿರುವ ಉರಿಯೂತವನ್ನು ಕಡಿಮೆ ಮಾಡಿ, ಜೀವಕೋಶಗಳನ್ನು ಸುರಕ್ಷಿತವಾಗಿಡುತ್ತವೆ.

ತೂಕ ನಿಯಂತ್ರಣಕ್ಕೆ ಬೆಸ್ಟ್

ಹೈಪೋಥೈರಾಯ್ಡ್ ಇದ್ದವರಿಗೆ ತೂಕ ಥಟ್ಟನೆ ಹೆಚ್ಚಾಗಿಬಿಡುತ್ತದೆ. ಎಷ್ಟು ಡಯಟ್ ಮಾಡಿದರೂ ತೂಕ ಇಳಿಯುವುದು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಸಾಯಂಕಾಲದ ಟೀ ಜೊತೆ ಎಣ್ಣೆ ತಿಂಡಿ ತಿನ್ನುವ ಬದಲು, ಸ್ವಲ್ಪ ಮಖಾನಾವನ್ನು ಡ್ರೈ ರೋಸ್ಟ್ ಮಾಡಿ ತಿಂದರೆ ಹೊಟ್ಟೆಯೂ ತುಂಬುತ್ತದೆ, ಕ್ಯಾಲೋರಿಯೂ ಹೆಚ್ಚಾಗುವುದಿಲ್ಲ. ಇದರಲ್ಲಿ ನಾರಿನಂಶ ಜಾಸ್ತಿ ಇರುವುದರಿಂದ ಜೀರ್ಣಕ್ರಿಯೆಯೂ ಚೆನ್ನಾಗಿ ಆಗುತ್ತದೆ.

ಹೈ ಪ್ರೊಟೀನ್

ಥೈರಾಯ್ಡ್ ಇರುವವರಿಗೆ ಸದಾ ಸುಸ್ತು, ಮೈಕೈ ನೋವು ಕಾಣಿಸಿಕೊಳ್ಳುವುದು ಸಹಜ. ಮಖಾನಾದಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಮತ್ತು ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ಇರುವುದರಿಂದ, ಇದು ದೇಹಕ್ಕೆ ದಿನಪೂರ್ತಿ ಅಗತ್ಯವಿರುವ ಶಕ್ತಿಯನ್ನು ಒದಗಿಸಿ, ದೇಹದ ಚಟುವಟಿಕೆಯನ್ನು ಚುರುಕಾಗಿರಿಸುತ್ತದೆ.

ಮಖಾನಾ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ, ಅಷ್ಟೇ ಮಿತವಾಗಿ ಬಳಸುವುದು ಮುಖ್ಯ. ವಿಪರೀತ ತಿಂದರೆ ಮಲಬದ್ಧತೆ ಉಂಟಾಗಬಹುದು. ಜೊತೆಗೆ, ನಿಮ್ಮ ಥೈರಾಯ್ಡ್ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸುತ್ತಾ, ಮಖಾನಾವನ್ನು ಒಂದು ಉತ್ತಮ ಆಹಾರ ಪದ್ಧತಿಯಾಗಿ ಅಳವಡಿಸಿಕೊಂಡರೆ ಖಂಡಿತ ಉತ್ತಮ ಫಲಿತಾಂಶ ಪಡೆಯಬಹುದು.

Must Read