HEALTH | ಬಾಳೆಹಣ್ಣಿನ ಸ್ಮೂದಿ, ಮಿಲ್ಕ್‌ ಶೇಕ್‌ ಕುಡಿಯುತ್ತೀರಾ? ಹಾಗಿದ್ರೆ ಮಿಸ್ ಮಾಡ್ದೆ ಇದನ್ನ ಓದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀವು ಯಾವಾಗಲೂ ಬಾಳೆಹಣ್ಣಿನ ಸ್ಮೂದಿಗಳು ಅಥವಾ ಮಿಲ್ಕ್‌ಶೇಕ್‌ಗಳನ್ನು ಕುಡಿಯುತ್ತೀರಾ ಅಥವಾ ನಿಮ್ಮ ಮಕ್ಕಳಿಗೆ ನೀಡುತ್ತೀರಾ? ಹಾಗಿದ್ರೆ ಮೊದಲು ಈ ಮಾಹಿತಿ ಓದಿ. ಈ ಎರಡು ಪದಾರ್ಥಗಳನ್ನು ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ತಿನ್ನುವುದು ಅಥವಾ ಕುಡಿಯುವುದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಜೊತೆಗೆ, ಇದು ನಿದ್ರೆಯ ಮೇಲೆ ಪರಿಣಾಮ ಬೀರಬಹುದು. ಬಾಳೆಹಣ್ಣುಗಳೊಂದಿಗೆ ಹಾಲಿನ ಅಡ್ಡಪರಿಣಾಮಗಳು ಏನು ಅನ್ನೋದನ್ನ ತಿಳಿಯೋಣ.

Have you been consuming milk and banana together? You must read this | The Times of India

ಬಾಳೆಹಣ್ಣು ಮತ್ತು ಹಾಲು ತಿನ್ನುವುದು ಅಥವಾ ಕುಡಿಯುವುದರಿಂದ ತೂಕ ಹೆಚ್ಚಿಸಲು ತುಂಬಾ ಪ್ರಯೋಜನಕಾರಿ. ತೀವ್ರ ವ್ಯಾಯಾಮ ಮಾಡುವವರಿಗೆ ಇದು ಶಕ್ತಿಯ ಆಹಾರ ಎಂದೂ ಹೇಳಲಾಗುತ್ತದೆ. ಆದರೆ, ಅಸ್ತಮಾದಂತಹ ಸಮಸ್ಯೆ ಇರುವವರು ಈ ರೀತಿ ಸೇವಿಸುವುದು ಒಳ್ಳೆಯದಲ್ಲ ಎಂದೂ ಹೇಳಲಾಗಿದೆ.

Banana & Oat Milk | MioMat

 

ಆಯುರ್ವೇದದ ಪ್ರಕಾರ ಹಾಲು ಮತ್ತು ಬಾಳೆಹಣ್ಣು ಒಟ್ಟಿಗೆ ಸೇವಿಸಬಾರದ ಆಹಾರಗಳ ಪಟ್ಟಿಯಲ್ಲಿವೆ. ಬಾಳೆಹಣ್ಣನ್ನು ಹಾಲಿನೊಂದಿಗೆ ತಿನ್ನುವುದರಿಂದ ದೇಹದಲ್ಲಿನ ಜೀರ್ಣಶಕ್ತಿ ದುರ್ಬಲಗೊಳ್ಳುತ್ತದೆ. ಇದರ ಪರಿಣಾಮವಾಗಿ, ಶೀತ, ಉಸಿರಾಟದ ತೊಂದರೆ, ಕಫದ ಸಮಸ್ಯೆಗಳು ಸಂಭವಿಸಬಹುದು.

Best Banana Milk Recipe - How To Make Korean Banana Milk At Home

 

ಏನು ಮಾಡಬೇಕೆಂದು ನೀವು ಯೋಚಿಸುತ್ತಿರಬಹುದು. ತಜ್ಞರ ಪ್ರಕಾರ ಎರಡನ್ನೂ ಒಟ್ಟಿಗೆ ತಿನ್ನದಿರುವುದು ನಮ್ಮ ಆರೋಗ್ಯಕ್ಕೆ ಉತ್ತಮ. ಜೊತೆಗೆ, ದೇಹವು ಎರಡರ ಎಲ್ಲಾ ಪ್ರಯೋಜನಕಾರಿ ಅಂಶಗಳನ್ನು ಉಳಿಸಿಕೊಳ್ಳಲು ಬಯಸಿದರೆ ಕನಿಷ್ಠ ಅರ್ಧ ಘಂಟೆಯ ಅಂತರದಲ್ಲಿ ಅವುಗಳನ್ನು ಸೇವಿಸುವುದು ಉಪಯುಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!