‘ತಲೆ ಭಾರ ಆಗಿ… ಮೂಗು ಕಟ್ಟಿಕೊಂಡಿದ್ಯಾ… ಕಣ್ಣುಗಳ ಮೇಲೂ ಒತ್ತಡ ಬಿದ್ದಂತೆ ಭಾಸವಾಗ್ತಿದ್ಯಾ?’
ಶೀತ ಬಂದಾಗ ಹಲವರಿಗೆ ಇದೇ ಸಮಸ್ಯೆ ಹೆಚ್ಚು ಕಾಡುತ್ತೆ. ಸಾಮಾನ್ಯ ಜ್ವರಕ್ಕಿಂತಲೂ ಶೀತದಿಂದ ಬರುವ ತಲೆನೋವು ತುಂಬಾ ಕಿರಿಕಿರಿ ಉಂಟು ಮಾಡುತ್ತದೆ. ವಿಶೇಷವಾಗಿ ಮೂಗು ಮುಚ್ಚಿಕೊಂಡಿದ್ದರೆ ತಲೆ ಸಿಡಿಯುವಂತೆ ಅನಿಸಬಹುದು. ಇಂತಹ ಸಮಯದಲ್ಲಿ ಮನೆಯಲ್ಲೇ ಮಾಡಬಹುದಾದ ಕೆಲವು ಸರಳ ಮನೆಮದ್ದುಗಳು ಬಹಳ ಸಹಾಯ ಮಾಡುತ್ತವೆ.
ಬಿಸಿ ನೀರಿನ ಆವಿ ತೆಗೆದುಕೊಳ್ಳಿ
ಒಂದು ಪಾತ್ರೆಯಲ್ಲಿ ಬಿಸಿ ನೀರು ಹಾಕಿ, ಅದಕ್ಕೆ ಚಿಟಿಕೆ ಅರಿಶಿನ ಅಥವಾ ನೀಲಗಿರಿ ಎಣ್ಣೆ 1–2 ಹನಿಗಳು ಹಾಕಿ ಆವಿ ತೆಗೆದುಕೊಳ್ಳಿ. ಇದರಿಂದ ಮೂಗು ತೆರೆದುಕೊಂಡು ತಲೆ ಭಾರ ಕಡಿಮೆಯಾಗುತ್ತದೆ.
ಶುಂಠಿ-ತುಳಸಿ ಕಷಾಯ
ಶುಂಠಿ, ತುಳಸಿ ಎಲೆ, ಮೆಣಸು ಮತ್ತು ಸ್ವಲ್ಪ ಬೆಲ್ಲ ಹಾಕಿ ಕಷಾಯ ಮಾಡಿ ಬಿಸಿ ಬಿಸಿಯಾಗಿ ಕುಡಿಯಿರಿ. ಇದು ಶೀತವನ್ನು ಕಡಿಮೆ ಮಾಡಿ ತಲೆನೋವಿಗೂ ಆರಾಮ ಕೊಡುತ್ತದೆ.
ಇದನ್ನೂ ಓದಿ:
ಅರಿಶಿನ ಹಾಲು
ರಾತ್ರಿ ಮಲಗುವ ಮೊದಲು ಬಿಸಿ ಹಾಲಿಗೆ ಅರ್ಧ ಚಮಚ ಅರಿಶಿನ ಹಾಕಿ ಕುಡಿಯಿರಿ. ದೇಹದ ಉರಿಯೂ ಕಡಿಮೆಯಾಗುತ್ತದೆ, ನಿದ್ರೆಯೂ ಚೆನ್ನಾಗಿರುತ್ತದೆ.
ಸಾಕಷ್ಟು ವಿಶ್ರಾಂತಿ
ಶೀತ ಬಂದಾಗ ದೇಹಕ್ಕೆ ವಿಶ್ರಾಂತಿ ತುಂಬಾ ಮುಖ್ಯ. ಹೆಚ್ಚು ಮೊಬೈಲ್ ಅಥವಾ ಲ್ಯಾಪ್‌ಟಾಪ್ ನೋಡೋದರಿಂದ ತಲೆನೋವು ಹೆಚ್ಚಾಗಬಹುದು.
ನೀರು ಹೆಚ್ಚು ಕುಡಿಯಿರಿ
ದೇಹ ಡಿಹೈಡ್ರೇಟ್ ಆದರೆ ತಲೆನೋವು ಇನ್ನಷ್ಟು ಹೆಚ್ಚಾಗಬಹುದು. ಆದ್ದರಿಂದ ಬಿಸಿ ನೀರು ಅಥವಾ ಸೂಪ್ ಕುಡಿಯಿರಿ.
ತಲೆನೋವು 2–3 ದಿನಗಳಾದರೂ ಕಡಿಮೆಯಾಗದೇ, ಜ್ವರ ಅಥವಾ ಉಸಿರಾಟದ ತೊಂದರೆ ಇದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. (Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)



