ಹೊಟ್ಟೆ ನೋವು ಅನೇಕ ಕಾರಣಗಳನ್ನು ಹೊಂದಿರಬಹುದು. ನೀವು ಸರಿಯಾದ ಕಾರಣವನ್ನು ತಿಳಿದಿದ್ದರೆ ಮತ್ತು ಅದಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಿದರೆ, ನೀವು ಬೇಗನೆ ನೋವನ್ನು ನಿವಾರಿಸಬಹುದು.
*ಗ್ಯಾಸ್ಟಿಕ್ ನಿಂದ ಹೊಟ್ಟೆ ನೋಯುತ್ತಿದ್ದರೆ ಎಳನೀರು ಅಥವಾ ತಣ್ಣೀರು ಕುಡಿಯಿರಿ.
* ಅಜೀರ್ಣದಿಂದಾಗುವ ಹೊಟ್ಟೆನೋವಿಗೆ ಒಂದು ಲೋಟ ನೀರಿಗೆ ನಿಂಬೆರಸ ಹಿಂಡಿ ಜೇನುತುಪ್ಪ ಬೆರೆಸಿ ಸೇವಿಸಿ.
*ಹೊಟ್ಟೆ ಸಮಸ್ಯೆಯಿಂದ ಹೊಟ್ಟೆನೋವು ಕಾಣಿಸಿಕೊಂಡರೆ ಪುದೀನಾ, ಶುಂಠಿ, ನಿಂಬೆರಸ, ಚಿಟಿಕೆ ಉಪ್ಪು ಬೆರೆಸಿದ ನೀರು ಕುಡಿಯಬಹುದು.
* ಹೊಟ್ಟೆ ನೋವು ಏನೇ ಇರಲಿ, ಒಂದು ಕಪ್ ಮೊಸರಿಗೆ 1 ಚಮಚ ಮೆಂತ್ಯ ಪುಡಿಯನ್ನು ಬೆರೆಸಿ ಕುಡಿಯಿರಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸರಾಗವಾಗಿ ನಡೆಸುತ್ತದೆ.