HEALTH | 30 ರ ನಂತರವೂ ನಿಮ್ಮ ಯೌವನವನ್ನು ಕಾಪಾಡಿಕೊಳ್ಳಬೇಕಾ? ಹಾಗಾದ್ರೆ ಇವತ್ತೇ ಈ ಆಹಾರಗಳನ್ನು ಬಿಟ್ಟುಬಿಡಿ

ವಯಸ್ಸಾದಂತೆ ನಮ್ಮ ದೇಹದಲ್ಲಿ ಹಲವಾರು ಬದಲಾವಣೆಗಳು ಉಂಟಾಗುತ್ತವೆ. ಚರ್ಮ ಸುಕ್ಕುಗಟ್ಟುತ್ತದೆ, ಕೂದಲು ಬಿಳಿಯಾಗುತ್ತದೆ, ತೂಕದಲ್ಲೂ ಸಾಕಷ್ಟು ಏರಿಳಿತಗಳು ಕಂಡು ಬರುತ್ತವೆ. 30 ವರ್ಷದ ನಂತರ ಆರೋಗ್ಯವಾಗಿರಲು ಮತ್ತು ಸದೃಢವಾಗಿ ಕಾಣಲು ಕೆಲವು ನಿಯಮಗಳನ್ನು ಪಾಲಿಸಬೇಕು. ಅವು ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ.

ಆಲ್ಕೋಹಾಲ್
ಆಲ್ಕೋಹಾಲ್ ಕ್ಯಾಲೊರಿಗಳಿಂದ ತುಂಬಿರುತ್ತವೆ. ಇದನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಉರಿಯೂತ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವಯಸ್ಸಾದಂತೆ ಕಾಣಲು ಇದು ಪ್ರಮುಖ ಕಾರಣವಾಗಿದೆ.

ಫ್ರೈಡ್ ಫುಡ್
ಡೀಪ್ ಫ್ರೈಡ್ ಆಹಾರಗಳು ತಿನ್ನಲು ತುಂಬಾ ರುಚಿಕರವಾಗಿರುತ್ತವೆ. ಆದರೆ, ಇವುಗಳಲ್ಲಿ ಕ್ಯಾಲೋರಿ ಅಧಿಕವಾಗಿರುತ್ತದೆ. ಇವುಗಳನ್ನು ತಿನ್ನುವುದರಿಂದ ಮುಖದ ಮೇಲೆ ಮೊಡವೆಗಳಂತಹ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ಪಿಸಿಒಎಸ್ ಹೊಂದಿರುವ ಜನರಲ್ಲಿ, ಲಿಪಿಡ್ ಪ್ರೊಫೈಲ್ ಮತ್ತು ಯಕೃತ್ತಿನ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಗಂಭೀರ ನಕಾರಾತ್ಮಕ ಪರಿಣಾಮ ಬೀರಬಹುದು.

ಮಸಾಲೆಗಳು
30 ವರ್ಷದ ನಂತರ ಮಸಾಲೆಭರಿತ ಆಹಾರಗಳನ್ನು ತಿನ್ನಬಾರದು. ಅವುಗಳನ್ನು ಹೆಚ್ಚು ಸೇವಿಸಿದರೆ ಹೊಟ್ಟೆಯಲ್ಲಿ ಉರಿಯೂತ, ಅಜೀರ್ಣ ಹಾಗೂ ಹಲವು ಚರ್ಮದ ಸಮಸ್ಯೆಗಳು ಬರಬಹುದು.

ಸೋಡಾ ಅಥವಾ ಕ್ಯಾನ್ಡ್ ಪಾನೀಯ
ಸೋಡಾ ಮತ್ತು ಪಾನೀಯಗಳು ಹಾನಿಕಾರಕ ರಾಸಾಯನಿಕಗಳು ಮತ್ತು ಸಕ್ಕರೆಯಿಂದ ಸಮೃದ್ಧವಾಗಿವೆ. ಅವುಗಳಲ್ಲಿ ಹೆಚ್ಚಿನ ಕ್ಯಾಲೊರಿಗಳಿವೆ. ಅವುಗಳನ್ನು ಸೇವಿಸುವುದರಿಂದ ದೇಹದ ತೂಕವನ್ನು ಸುಲಭವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!