ಸೋರೆಕಾಯಿ ಪಲ್ಯ ಸೇವಿಸುವುದರಿಂದ, ಅದರಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ನೀವು ಪಡೆಯುತ್ತೀರಿ. ಮತ್ತೊಂದೆಡೆ, ಎದ್ದ ತಕ್ಷಣ ಶುಂಠಿ ಬೆರೆಸಿದ ಸೋರೆಕಾಯಿ ರಸವನ್ನು ಕುಡಿಯುವುದು ನಮ್ಮ ದೇಹಕ್ಕೆ ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತದೆ.
ಸೋರೆಕಾಯಿ ರಸವನ್ನು ಶುಂಠಿಯೊಂದಿಗೆ ಬೆರೆಸಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹಿಗಳಿಗೂ ತುಂಬಾ ಸೂಕ್ತವಾಗಿದೆ.
ಈ ಜ್ಯೂಸ್ ಕುಡಿಯುವುದರಿಂದ ನಿಮ್ಮ ಮೆಟಾಬಾಲಿಸಮ್ ಅನ್ನು ನಿಯಂತ್ರಣದಲ್ಲಿರಿಸುತ್ತದೆ ಮತ್ತು ಬೊಜ್ಜು ತಡೆಯುತ್ತದೆ.
ಈ ಜ್ಯೂಸ್ ರಕ್ತದೊತ್ತಡವನ್ನು ನಿಯಂತ್ರಿಸಲು ಕೂಡ ತುಂಬಾ ಒಳ್ಳೆಯದು. ಈ ರಸವು ರಕ್ತವನ್ನು ಶುದ್ಧಗೊಳಿಸುತ್ತದೆ. ಜೊತೆಗೆ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ.