ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಲೀಸ್ ಠಾಣೆಯಲ್ಲಿ ಸಿಟಿ ರವಿ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ ಆರ್. ಅಶೋಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆತನನ್ನು ಕೊಲ್ಲುವ ಉದ್ದೇಶವಿತ್ತು ಎಂದು ಸ್ವತಃ ಸಿಟಿ ರವಿ ಹೇಳುತ್ತಾರೆ. ಯಾವುದೇ ವ್ಯಕ್ತಿಯನ್ನು ಬಂಧಿಸಿದ ಬಳಿಕ ನ್ಯಾಯಾಲಯದ ಮುಂದೆ ಹಾಜರು ಪಡಿಸೋದು ಸಂವಿಧಾನ ಬದ್ಧ ಕ್ರಮ, ಅದನ್ನು ಬಿಟ್ಟು ಪೊಲೀಸರು ಯಾಕೆ ರವಿಯವರನ್ನು ಕಾಡಿನಲ್ಲಿ ಸುತ್ತಿಸಿದರು?
ಅವರನ್ನು ಸುತ್ತಾಡಿಸುತ್ತಿದ್ದ ಜಾಡು ಹಿಡಿದು ಪೀಪಲ್ಸ್ ಫ್ರಂಟ್, ಕೆಎಫ್ಡಿ ಅಥವಾ ಕಾಂಗ್ರೆಸ್ ಪಕ್ಷದ ಸಹೋದದರಾಗಿರುವ ಕುಕ್ಕರ್ ಬ್ರ್ಯಾಂಡ್ ಉಗ್ರರು ದಾಳಿ ನಡೆಸಿದ್ದರೆ ಅದಕ್ಕೆ ಯಾರು ಹೊಣೆ? ಎಂದು ಅಶೋಕ್ ಪ್ರಶ್ನೆ ಮಾಡಿದ್ದಾರೆ.