ಇಂದಿನ ತರಾತುರಿಯ ಜೀವನಶೈಲಿ ಮತ್ತು ಅಸಮತೋಲಿತ ಆಹಾರ ಪದ್ಧತಿಯಿಂದಾಗಿ ಹೊಟ್ಟೆಯಲ್ಲಿ ಗ್ಯಾಸ್ (ಗ್ಯಾಸ್ಟ್ರಿಕ್) ಉತ್ಪತ್ತಿಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಜೀರ್ಣಕ್ರಿಯೆಯಲ್ಲಿ ಏರುಪೇರಾದಾಗ ಈ ತೊಂದರೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಹೊಟ್ಟೆಯಲ್ಲಿ ಅನಿಲ ಹೆಚ್ಚಾಗಲು ಪ್ರಮುಖ ಅಂಶಗಳು:
- ತಪ್ಪಾದ ಆಹಾರ ಶೈಲಿ: ಅತಿಯಾದ ಖಾರ, ಎಣ್ಣೆಯಲ್ಲಿ ಕರಿದ ತಿಂಡಿಗಳು, ಜಂಕ್ ಫುಡ್ ಹಾಗೂ ಬಬಲ್ ಗಮ್ ಸೇವನೆಯು ಜೀರ್ಣಾಂಗದಲ್ಲಿ ಅನಿಲವನ್ನು ಹೆಚ್ಚಿಸುತ್ತದೆ.
- ವೇಗವಾಗಿ ಆಹಾರ ಸೇವನೆ: ಧಾವಂತದಲ್ಲಿ ಆಹಾರ ಅಗಿಯದೆ ನುಂಗುವಾಗ, ಆಹಾರದ ಜೊತೆಗೆ ಗಾಳಿಯೂ ಹೊಟ್ಟೆಯನ್ನು ಸೇರುತ್ತದೆ.
- ಕೆಲವು ನಿರ್ದಿಷ್ಟ ಆಹಾರಗಳು: ಕಡಲೆಕಾಯಿ, ಬೇಳೆಕಾಳುಗಳು, ಎಲೆಕೋಸು ಹಾಗೂ ತಂಪಾದ ಪಾನೀಯಗಳು ಜೀರ್ಣವಾಗಲು ಹೆಚ್ಚು ಸಮಯ ತಗೆದುಕೊಳ್ಳುವುದರಿಂದ ಗ್ಯಾಸ್ ಉಂಟಾಗುತ್ತದೆ.
- ದ್ವಂದ್ವ ಜೀವನಶೈಲಿ: ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ತಡರಾತ್ರಿ ನಿದ್ರೆ ಮತ್ತು ಮಾನಸಿಕ ಒತ್ತಡವು ಜೀರ್ಣರಸಗಳ ಉತ್ಪತ್ತಿಯನ್ನು ಕುಂಠಿತಗೊಳಿಸುತ್ತದೆ.



