November 13, 2026
Friday, November 13, 2026
spot_img

ಶೀತ-ಕೆಮ್ಮು ಆಗುತ್ತೆ ಅಂತ ಸೀತಾಫಲ ತಿನ್ನೋದು ಬಿಡ್ತಿದ್ದೀರಾ? ಹಾಗಾದ್ರೆ ಈ ವಿಷಯ ತಿಳಿದುಕೊಳ್ಳಿ

ಚಳಿಗಾಲದ ಈ ವಾತಾವರಣದಲ್ಲಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಾಣಸಿಗುವ ರುಚಿಕರವಾದ ಹಾಗೂ ಸಿಹಿಯಾದ ಹಣ್ಣುಗಳಲ್ಲಿ ಸೀತಾಫಲ ಕೂಡ ಒಂದು. ಹೊರಗೆ ಒರಟಾಗಿದ್ದರೂ, ಒಳಗಡೆ ಮೃದುವಾದ ಹಾಲಿನಂತಹ ಸಿಹಿಯನ್ನು ಹೊಂದಿರುವ ಈ ಹಣ್ಣು ಚಳಿಗಾಲದಲ್ಲಿ ಆರೋಗ್ಯಕ್ಕೆ ವರದಾನವಿದ್ದಂತೆ. ಚಳಿಗಾಲದಲ್ಲಿ ಸೀತಾಫಲ ತಿನ್ನುವುದು ಒಳ್ಳೆಯದೇ? ಎಂಬ ಅನುಮಾನ ಬಹುತೇಕರಲ್ಲಿದೆ. ಶೀತವಾಗಬಹುದು ಎಂಬ ಕಾರಣಕ್ಕೆ ಕೆಲವರು ಇದನ್ನು ದೂರವಿಡುತ್ತಾರೆ. ಆದರೆ ಸತ್ಯ ಏನೆಂದರೆ, ಚಳಿಗಾಲವೇ ಸೀತಾಫಲ ತಿನ್ನುವ ಅತಿ ಸೂಕ್ತ ಕಾಲ.

ಚಳಿಗಾಲ ಬಂತೆಂದರೆ ಸಾಕು, ಹಲವರಿಗೆ ಶೀತ, ಕೆಮ್ಮು, ನೆಗಡಿ ಮತ್ತು ಗಂಟಲು ನೋವು ಸರ್ವೆಸಾಮಾನ್ಯ. ಸೀತಾಫಲದಲ್ಲಿ ಅಪಾರ ಪ್ರಮಾಣದ ವಿಟಮಿನ್ ಸಿ ಇದೆ. ಇದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ, ಚಳಿಗಾಲದಲ್ಲಿ ಕಾಡುವ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಚಳಿಗಾಲದಲ್ಲಿ ಕೆಲವೊಮ್ಮೆ ಜೀರ್ಣಕ್ರಿಯೆ ಮಂದವಾಗುತ್ತದೆ. ಸೀತಾಫಲದಲ್ಲಿ ನಾರಿನಾಂಶ ಅಧಿಕವಾಗಿದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸರಾಗವಾಗಿಡಲು ಮತ್ತು ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡಲು ಅತ್ಯಂತ ಪ್ರಯೋಜನಕಾರಿಯಾಗಿದೆ.

ಚಳಿಗಾಲದಲ್ಲಿ ಅನೇಕರಿಗೆ ಸುಸ್ತು ಅಥವಾ ಬೇಸರದ ಅನುಭವವಾಗುತ್ತದೆ. ಸೀತಾಫಲವು ನೈಸರ್ಗಿಕ ಸಕ್ಕರೆ ಮತ್ತು ಶಕ್ತಿಯ ಉತ್ತಮ ಮೂಲವಾಗಿದೆ. ಇದನ್ನು ತಿನ್ನುವುದರಿಂದ ದೇಹಕ್ಕೆ ತಕ್ಷಣವೇ ಚೈತನ್ಯ ಸಿಗುತ್ತದೆ ಮತ್ತು ದಿನವಿಡೀ ಉಲ್ಲಾಸದಿಂದರಲು ಸಹಾಯ ಮಾಡುತ್ತದೆ.

ಈ ಹಣ್ಣಿನಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡಲು ಮತ್ತು ಹೃದಯದ ಸ್ನಾಯುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಚಳಿಗಾಲದ ಈ ದಿನಗಳಲ್ಲಿ ಸೀತಾಫಲವನ್ನು ಮಿತವಾಗಿ ತಿನ್ನುವುದರಿಂದ ಬಾಯಿಗೆ ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ನೂರಕ್ಕೆ ನೂರು ಲಾಭ ಖಂಡಿತ.

Must Read

Skip to toolbar