October 17, 2026
Saturday, October 17, 2026
spot_img

Health | ಸೌಂದರ್ಯಕ್ಕಷ್ಟೇ ಅಲ್ಲ, ಆರೋಗ್ಯಕ್ಕೂ ಕುತ್ತು ತರಬಹುದು ಈ ‘ಡಾರ್ಕ್ ನೆಕ್’

ಕುತ್ತಿಗೆಯ ಸುತ್ತಲಿನ ಚರ್ಮ ಕಪ್ಪಾಗುವುದನ್ನು ವೈದ್ಯಕೀಯ ಭಾಷೆಯಲ್ಲಿ ಅಕಾಂಥೋಸಿಸ್ ನೈಗ್ರಿಕನ್ಸ್ ಎಂದು ಕರೆಯಲಾಗುತ್ತದೆ. ಇದಕ್ಕೆ ಮುಖ್ಯ ಕಾರಣಗಳು:

ರಕ್ತದಲ್ಲಿ ಸಕ್ಕರೆ ಮಟ್ಟ ಏರಿಕೆಯಾದಾಗ ಅಥವಾ ಮಧುಮೇಹದ ಮುನ್ಸೂಚನೆ ಇರುವವರಲ್ಲಿ ಕುತ್ತಿಗೆ ಕಪ್ಪಾಗುತ್ತದೆ.

ದೇಹದ ತೂಕ ಹೆಚ್ಚಾದಂತೆ ಹಾರ್ಮೋನ್ ಏರುಪೇರಾಗಿ ಚರ್ಮದ ಬಣ್ಣ ಬದಲಾಗಬಹುದು.

ಮಹಿಳೆಯರಲ್ಲಿ ಹಾರ್ಮೋನ್ ಅಸಮತೋಲನದಿಂದ ಕುತ್ತಿಗೆ ಮತ್ತು ಕಂಕುಳ ಭಾಗ ಕಪ್ಪಾಗುವುದು ಸಾಮಾನ್ಯ.

ಬಿಸಿಲಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ಕುತ್ತಿಗೆಯ ಹಿಂಭಾಗ ಕಪ್ಪಾಗುತ್ತದೆ.

ರಾಸಾಯನಿಕಯುಕ್ತ ಕ್ರೀಮ್‌ಗಳು ಅಥವಾ ಪರ್ಫ್ಯೂಮ್‌ಗಳ ಬಳಕೆಯಿಂದ ಚರ್ಮ ಅಲರ್ಜಿಯಾಗಿ ಬಣ್ಣ ಬದಲಾಗಬಹುದು.

ಸರಿಯಾಗಿ ಸ್ನಾನ ಮಾಡದಿದ್ದಲ್ಲಿ ಮೃತ ಕೋಶಗಳು ಮತ್ತು ಕೊಳೆ ಶೇಖರಣೆಯಾಗಿ ಕಪ್ಪು ಪದರ ಉಂಟಾಗುತ್ತದೆ.

Must Read