ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಯಾಲ್ಸಿಯಂ ಹೇರಳವಾಗಿರುವ ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಸರಿಲ್ಲದಿದ್ದರೆ ಊಟ ಪೂರ್ತಿಯಾಗೋದೆ ಇಲ್ಲ. ಊಟದ ಜೊತೆ ಮೊಸರು ಸೇವಿಸಿದರೆ ಹೆಚ್ಚಿನ ಆರೋಗ್ಯ ಲಾಭವನ್ನು ಪಡೆಯಬಹುದು. ರಾತ್ರಿ ವೇಳೆ ಮೊಸರು ಸೇವಿಸಿದರೆ ಹೊಟ್ಟೆಯ ಸಮಸ್ಯೆ ಬರುವ ಕಾರಣದಿಂದ ಮಧ್ಯಾಹ್ನದ ಹೊತ್ತಿನಲ್ಲಿ ಹೆಚ್ಚಿನ ಜನ ಊಟಕ್ಕೆ ಮೊಸರು ಬಳಸುತ್ತಾರೆ.
ಮೊಸರು ಸ್ಟೀರಾಯ್ಡ್ ಹಾರ್ಮೋನುಗಳ ಉತ್ಪಾದನೆಯನ್ನು ಕಡಿಮೆ ಮಾಡುವ ಮೂಲಕ ತೂಕವನ್ನು ನಿಯಂತ್ರಿಸಲು ನಮಗೆ ಸಹಾಯ ಮಾಡುತ್ತದೆ. ಮೊಸರು ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮೊಸರು ಕೆಲವು ವೈರಲ್ ಕಾಯಿಲೆಗಳಿಂದ ರಕ್ಷಿಸುತ್ತದೆ. ಬಿಪಿಯನ್ನು ನಿಯಂತ್ರಣದಲ್ಲಿ ಇಡುತ್ತದೆ.
ಮೊಸರು ಸೇವಿಸುವುದರಿಂದ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾದ ಶೇಕಡಾವಾರು ಪ್ರಮಾಣ ಹೆಚ್ಚಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುವ ಸಾಧ್ಯತೆ ಹೆಚ್ಚು. ಬೆಳಗ್ಗೆ, ರಾತ್ರಿ ಸಮಯಕ್ಕಿಂತ ಮಧ್ಯಾಹ್ನ ಸೇವಿಸಿದರೆ ಇಡೀ ದಿನ ಒಳ್ಳೆಯದು ಎನ್ನುತ್ತಾರೆ ತಜ್ಞರು. ಮೂಳೆ ಮತ್ತು ಹಲ್ಲುಗಳ ರಕ್ಷಣೆಯಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ.