HEALTHY DRINK |ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಈ ಟೇಸ್ಟಿ ಸ್ಮೂದಿ, ಇಲ್ಲಿದೆ ರೆಸಿಪಿ

ಬೇಸಿಗೆ ಬಂತೆಂದರೆ ತಂಪು ಆಹಾರದ ಆಸೆ. ಫ್ರಿಡ್ಜ್‌ನಿಂದ ಆಹಾರ ಅಥವಾ ತಂಪು ಪಾನೀಯಗಳನ್ನು ಕುಡಿಯುವುದು ಒಳ್ಳೆಯದಲ್ಲ. ಈ ಸಂದರ್ಭದಲ್ಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಣ್ಣುಗಳಿಂದ ಮಾಡಿದ ಸ್ಮೂದಿಗಳನ್ನು ಕುಡಿಯಲು ಸೂಚಿಸಲಾಗುತ್ತದೆ.

ಸ್ಟ್ರಾಬೆರಿ ಮತ್ತು ಮ್ಯಾಂಗೋ ಸ್ಮೂದಿಗೆ ಬೇಕಾಗುವ ವಸ್ತುಗಳು:

ಸ್ಟ್ರಾಬೆರಿ – 1/2 ಕಪ್
ಬಾಳೆಹಣ್ಣು – 1
ಮಾವು – 1/2
ಬಾದಾಮಿ ಹಾಲು – 1 ಕಪ್
ಬಾದಾಮಿ ಬೆಣ್ಣೆ – 1 ಟೀಸ್ಪೂನ್

ಬ್ಲೆಂಡ್ ನಲ್ಲಿ ಎಲ್ಲ ಪದಾರ್ಥವನ್ನು ಮಿಶ್ರಣ ಮಾಡಿ ಬೇಕಾದಲ್ಲಿ ಐಸ್ ಹಾಕಿ, ಸರ್ವ್ ಮಾಡಿ.

ಆಪಲ್ ಸ್ಮೂದಿಗೆ ಬೇಕಾಗುವ ಪದಾರ್ಥ:

ಎಳ ನೀರು : 1 ಕಪ್
ಪಾಲಕ್ : 1 ಕಪ್
ಬಾಳೆ ಹಣ್ಣು 1
ಸೇಬು : 1
ದಾಲ್ಚಿನಿ ಪುಡಿ : 1/8 ಚಮಚ
ಜಾಯಿಕಾಯಿ ಪುಡಿ : 1/8 ಚಮಚ

ಎಲ್ಲ ಪದಾರ್ಥವನ್ನು ಬ್ಲೆಂಡ್ ಮಾಡಿ. ಬೇಕಾದಲ್ಲಿ ಐಸ್ ಹಾಕಿ ಕುಡಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!