ACCEPT REJECTION | ಪ್ರೀತಿಯಲ್ಲಿ ರಿಜೆಕ್ಟನ್‌ ಒಪ್ಪಿಕೊಳ್ಳೋಕೆ ಯಾಕಿಷ್ಟು ಕಷ್ಟ? ತಪ್ಪದೇ ಈ ಲೇಖನ ಓದಿ..

ಮೇಘನಾ ಶೆಟ್ಟಿ, ಶಿವಮೊಗ್ಗ

ಪ್ರೀತಿ ರಿಜೆಕ್ಟ್‌ ಮಾಡಿದ್ದಕ್ಕೆ ಆಸಿಡ್‌ ಹಾಕೋದು, ಪ್ರೀತಿಯಲ್ಲಿದ್ದು ಬ್ರೇಕಪ್‌ ಮಾಡಿಕೊಂಡದ್ದಕ್ಕೆ ಕೊಲೆ ಮಾಡೋದು.. ಇಂಥ ಸಾಕಷ್ಟು ಪ್ರಕರಣಗಳ ಬಗ್ಗೆ ನೀವು ಕೇಳಿದ್ದೀರಿ..

ಪ್ರೀತಿಸಿ ಬಿಟ್ಟು ಹೋದ ಹುಡುಗನ ಬೆನ್ನ ಹಿಂದೆ ನಿಂತು, ಅವನ ಜೀವನ ಸುಖಕರವಾಗಿರಲಿ ಎಂದು ಅಕ್ಷತೆ ಕಾಳು ಹಾಕಿದವರು, ಇಷ್ಟವಿಲ್ಲ ಎಂದು ಹೇಳಿ ಹೋದ ಹುಡುಗಿಗೆ ಇಷ್ಟವಾಗುವ ಹುಡುಗ ಸಿಗಲೆಂದು ಹಾರೈಸುವವರೂ ಇದ್ದಾರೆ. ಇವರೆಲ್ಲಾ ಓಲ್ಡ್‌ ಫ್ಯಾಶನ್ಡ್‌, ತ್ಯಾಗಮಯಿ ಇಮೇಜ್‌ ಕಟ್ಟಿಕೊಡಬಹುದು. ಬಟ್‌ ಇವರೇ ರೈಟ್‌!!

ಏಷ್ಟೋ ಬಾರಿ ನಾವು ಪ್ರೀತಿಸಿದವರು ನಮಗೆ ಸಿಗೋದಿಲ್ಲ. ಕಾರಣ ಏನೇ ಇರಲಿ, ಸಂದರ್ಭ ಕೆಟ್ಟದಿರಲಿ. ಆದರೆ ರಿಜೆಕ್ಷನ್‌ ಒಪ್ಪಿಕೊಳ್ಳೋದನ್ನು ಕಲಿಯಬೇಕು. ಇದು ಪ್ರೀತಿ ವಿಷಯದಲ್ಲಿ ಮಾತ್ರ ಅಲ್ಲ. ಜೀವನದಲ್ಲಿ ಸಿಗೋ ಯಾವ ರಿಜೆಕ್ಷನ್‌ನ್ನೂ ಮನಸ್ಸಿಗೆ ತೆಗೆದುಕೊಳ್ಳಬೇಡಿ..

ತಿರಸ್ಕಾರದ ಸ್ಟೇಜಸ್‌ ಯಾವುದು?

1 ಮೊದಲು ಅವರು ನಿಮ್ಮನ್ನು ರಿಜೆಕ್ಟ್‌ ಮಾಡಿದ್ದಾರಾ ಇಲ್ಲವಾ ಅನ್ನೋದೇ ಅರ್ಥವಾಗೋದಿಲ್ಲ. ಹೇಗೋ ಮಾಡಿ ಸರಿ ಮಾಡಿಬಿಡಬಹುದು ಎನಿಸುವುದು.

2 ನಂತರ ರಿಜೆಕ್ಷನ್‌ ಅರ್ಥವಾಗಿ ಕೋಪ ಬರೋದು, ನನ್ನನ್ನು ಯಾಕೆ ರಿಜೆಕ್ಟ್‌ ಮಾಡಿದ್ದಾರೆ ಎಂದು ಸಿಟ್ಟಾಗುವುದು.

3 ನೆಕ್ಸ್ಟ್‌ ಆ ವ್ಯಕ್ತಿಯನ್ನು ಮತ್ತೆ ಪಡೆಯೋದಕ್ಕೆ ಇನ್ನಿಲ್ಲದ ಸಾಹಸ ಮಾಡೋದು. ಅವರ ಕಾಲು ಹಿಡಿಯೋಕೂ ಬೇಸರ ಮಾಡಿಕೊಳ್ಳದಿರೋದು.

4 ಕೆಲವರಿಗೆ ಈ ಸ್ಟೇಜ್‌ ನಂತರ ಖಿನ್ನತೆ ಕಾಡುತ್ತದೆ. ತಮ್ಮಲ್ಲೇ ಏನೋ ತಪ್ಪಿದೆಯಾ ಅಥವಾ ಸಂದರ್ಭದ ತಪ್ಪಾ ಎಂದು ಆಲೋಚಿಸುತ್ತಾರೆ.

5 ನಂತರ ಜೀವನವನ್ನು ಒಪ್ಪಿಕೊಳ್ತಾರೆ. ಲೈಫ್‌ ನೀಡಿದ ರಿಜೆಕ್ಷನ್‌ ಅರ್ಥಮಾಡಿಕೊಳ್ತಾರೆ.

ರಿಜೆಕ್ಟನ್‌ನಿಂದ ಹೊರಬರೋದು ಹೇಗೆ?

1 ರಿಜೆಕ್ಷನ್‌ ನಮ್ಮ ಜೀವನದ ಅವಿಭಾಜ್ಯ ಅಂಗ ಅನ್ನೋದನ್ನು ಅರ್ಥ ಮಾಡಿಕೊಳ್ಳಿ. ಕಂಫರ್ಟ್‌ ಝೋನ್‌ ಬಿಟ್ಟು ಹೊರಬನ್ನಿ.

2 ಏನು ನಡೆದಿದೆಯೋ ಅದು ನಡೆದಿದೆ ಅಷ್ಟೆ. ಈಗ ಪಾಸ್ಟ್‌ಗೆ ಹೋಗಿ ಏನನ್ನೂ ಬದಲಾಯಿಸೋದಕ್ಕೆ ಆಗೋದಿಲ್ಲ.

3 ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳೋದಕ್ಕೆ ಪ್ರಯತ್ನಿಸಿ, ನೋವಾಗುತ್ತಿದೆಯಾ? ಕೋಪದಲ್ಲಿದ್ದೀರಾ? ನಿಮ್ಮ ಬಗ್ಗೆ ನಿಮಗೇ ಕನಿಕರ ಮೂಡುತ್ತಿದ್ಯಾ? ಅರ್ಥಮಾಡಿಕೊಳ್ಳಿ.

4 ನಿಮ್ಮ ಬಗ್ಗೆ ನಿಮಗೆ ಅಸಹ್ಯ ಭಾವನೆ, ಸೆಲ್ಫ್‌ ಪಿಟಿ ಬೇಡ. ನಿಮ್ಮನ್ನು ನೀವು ಪ್ರೀತಿಯಿಂದ ಕಾಣಬೇಕು. ಯಾವುದೇ ವ್ಯಕ್ತಿ ನಿಮ್ಮನ್ನು ಬಿಟ್ಟುಹೋಗಲಿ, ನೀವು ಎಂಥವರು ಎಂದು ನಿಮಗೇ ಗೊತ್ತಲ್ವಾ?

5 ರಿಜೆಕ್ಷನ್‌ ಸಿಟ್ಟಿಗೆ ಸಿಕ್ಕಿದ್ದೆಲ್ಲಾ ತಿಂದು, ಜಂಕ್‌ಗೆ ದಾಸರಾಗಿ, ಮದ್ಯಪಾನ, ಡ್ರಗ್ಸ್‌, ಸ್ಮೋಕ್‌ ಮೊರೆ ಹೋಗಬೇಡಿ. ವ್ಯಾಯಾಮ ಹೆಲ್ತಿ ಈಟಿಂಗ್‌ ಕಡೆ ಗಮನ ಕೊಡಿ.

6 ಆಗಿರುವ ಅನುಭವದಿಂದ ಕಲಿಯೋದು ಸಾಕಷ್ಟಿದೆ. ಒಂದು ರಿಲೇಶನ್‌ಶಿಪ್‌ನಿಂದ ನಿಮ್ಮ ಜೀವನ ಮುಗಿದುಹೋಗಲ್ಲ, ಒಮ್ಮೆ ಆದ ತಪ್ಪನ್ನು ಮತ್ತೆ ಮಾಡಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!